Publish Date: Sun, 07 Oct 2018 (18:00 IST)
Updated Date: Sun, 07 Oct 2018 (18:02 IST)
ಲಾವರಸದಂತೆ ಭೂಮಿಯಿಂದ ಬೆಂಕಿಯ ಜ್ವಾಲೆ ಮೇಲೆ ಏಳುತ್ತಿದೆ. ಇದರಿಂದ ಜನರು ಭಯಭೀತರಾಗಿರುವ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಮನಮೈನಹಟ್ಟಿ ನಾರಾಯಣ ನಾಯ್ಕ್ ಎಂಬುವವರ ಜಮೀನಿನಲ್ಲಿ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ನಾಯಕನಹಟ್ಟಿ ಸಮೀಪದ ಮನಮೈನಹಟ್ಟಿ ಜಮೀನಿನಲ್ಲಿ ವಿದ್ಯುತ್ ತಂತಿಯಲ್ಲಿ ಸಮಸ್ಯೆಯಾಗಿ ಲಾವಾರಸದಂತೆ ಬೆಂಕಿ ಉತ್ಪತ್ತಿಯಾಯಿತು. ಭೂಮಿಯಿಂದ ಕೊತ ಕೊತ ಕುದಿಯುವ ಮಾದರಿಯಲ್ಲಿ ಕಾಣಿಸಿಕೊಂಡ ಬೆಂಕಿ ಜನರಲ್ಲಿ ಆತಂಕವನ್ನುಂಟುಮಾಡಿದೆ.
ನಾಲ್ಕು ದಿನಗಳ ಹಿಂದೆ ನಡೆದಿರುವ ಘಟನೆಯ ವಿಡಿಯೋ ವೈರಲ್ ಆಗಿದೆ. ಲಾವಾರಸವನ್ನೇ ಹೋಲುವಂತೆ ಕಂಡುಬಂದ ಬೆಂಕಿಗೆ ಜನರು ಆತಂಕಗೊಂಡಿದ್ದಾರೆ.
ವಿದ್ಯುತ್ ಕಂಬದ ಮೂಲಕ ಅರ್ತಿಂಗ್ ಬಂದು ಕಂಬದಲ್ಲಿದ್ದ ಕಬ್ಬಿಣ ಬೆಂಕಿಯಾಗಿ ಬಂದಿದೆ ಎನ್ನುವುದು ಬೆಸ್ಕಾಂ ಸಿಬ್ಬಂದಿ ಹೇಳಿಕೆಯಾಗಿದೆ. ಏನೇ ಆದರೂ ಘಟನೆಯಿಂದ ಮನಮೈನಹಟ್ಟಿ ಗ್ರಾಮದ ಜನತೆಯಲ್ಲಿ ಭಯ ಮನೆಮಾಡಿದೆ.