Select Your Language

Notifications

webdunia
webdunia
webdunia
webdunia

ಸಚಿವ ಕೆ.ಎಸ್ ಈಶ್ವರಪ್ಪ ಸರ್ಕಾರಿ ನಿವಾಸದಲ್ಲಿ ಬೆಂಕಿ ಅವಘಡ

ಸಚಿವ ಕೆ.ಎಸ್ ಈಶ್ವರಪ್ಪ ಸರ್ಕಾರಿ ನಿವಾಸದಲ್ಲಿ ಬೆಂಕಿ ಅವಘಡ
ಬೆಂಗಳೂರು , ಮಂಗಳವಾರ, 17 ಮಾರ್ಚ್ 2020 (10:34 IST)
ಬೆಂಗಳೂರು : ಸೋಮವಾರ ರಾತ್ರಿ ಸಚಿವ ಕೆ.ಎಸ್ ಈಶ್ವರಪ್ಪ ಅವರ  ಸರ್ಕಾರಿ ನಿವಾಸದಲ್ಲಿ ಬೆಂಕಿ ಅವಘಡ  ಸಂಭವಿಸಿದೆ ಎಂಬುದಾಗಿ ತಿಳಿದುಬಂದಿದೆ.


ಸೋಮವಾರ ರಾತ್ರಿ ಈಶ್ವರಪ್ಪ ಬೆಡ್ ರೂಂನಲ್ಲಿ ಮಲಗಲು ಹೋದಾಗ ಎಸಿ ಆನ್ ಮಾಡಿದ ವೇಳೆ ಬೆಂಕಿ ಕಾಣಿಸಿಕೊಂಡಿದ್ದು, ಈ ಬೆಂಕಿ ರೂಂಗೆ ಆವರಿಸಿ ಟಿವಿ ಕಬೋರ್ಡ್  ಮತ್ತು ಕೆಲ ದಾಖಲೆಗಳನ್ನು ಸುಟ್ಟು ಹಾಕಿದೆ ಎನ್ನಲಾಗಿದೆ.


ತಕ್ಷಣ ಈಶ್ವರಪ್ಪ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಅಗ್ನಿ ಶಾಮಕದಳದವರು ತಕ್ಷಣ ಬಂದು ಬೆಂಕಿ ನಂದಿಸಿದ್ದಾರೆ. ಈ ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿದೆ ಈಶ್ವರಪ್ಪ ಹಾಗೂ ಅವರ ಪತ್ನಿ ಪಾರಾಗಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆ