Select Your Language

Notifications

webdunia
webdunia
webdunia
webdunia

ಏರ್ ಶೋನಲ್ಲಿ ಅಗ್ನಿ ಅವಘಡ: 50 ಕ್ಕೂ ಹೆಚ್ಚು ವಾಹನಗಳು ಸುಟ್ಟು ಭಸ್ಮ

ಏರ್ ಶೋ ಬೆಂಗಳೂರು
ಬೆಂಗಳೂರು , ಶನಿವಾರ, 23 ಫೆಬ್ರವರಿ 2019 (13:22 IST)
ಬೆಂಗಳೂರು: ಯಲಹಂಕಾ ವಾಯುನೆಲೆಯಲ್ಲಿ ನಡೆಯುತ್ತಿರುವ ಏರ್ ಶೋನಲ್ಲಿ ಅಗ್ನಿದುರಂತ ಸಂಭವಿಸಿದ್ದು, 50 ಕ್ಕೂ ಹೆಚ್ಚು ವಾಹನಗಳು ಸುಟ್ಟು ಕರಕಲಾಗಿವೆ.


ಪಾರ್ಕಿಂಗ್ ಏರಿಯಾ ಬಳಿ ಒಣ ಹುಲ್ಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಕಾರಣ ಪಕ್ಕದಲ್ಲಿ ನಿಲ್ಲಿಸಿದ್ದ ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಸ್ಥಳದಲ್ಲಿ ಸುಮಾರು 700 ಕ್ಕೂ ಹೆಚ್ಚು ವಾಹನಗಳನ್ನು ಪಾರ್ಕ್ ಮಾಡಲಾಗಿತ್ತು.

ಮೊನ್ನೆಯಷ್ಟೇ ಏರ್ ಶೋ ಆರಂಭಕ್ಕೂ ಮೊದಲು ಸೂರ್ಯ ಕಿರಣ ವಿಮಾನ ದುರಂತದಲ್ಲಿ ಪೈಲಟ್ ಸಾವಿಗೀಡಾಗಿದ್ದರು. ಇದರ ಬಳಿಕ ಇದೀಗ ಮತ್ತೊಂದು ದುರಂತ ಸಂಭವಿಸಿದ್ದು, ಏರ್ ಶೋ ಮೇಲೆ ಕಪ್ಪು ಚುಕ್ಕೆಯಾಗಿದೆ. ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದಾರೆ. ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿರುವುದರಿಂದ ಇಂದಿನ ಶೋ ಸದ್ಯಕ್ಕೆ ರದ್ದಾಗಿದೆ.





















































ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ತಾನು ಹೆತ್ತ ಮಗುವಿನ ಮೇಲೆ ತಾಯಿ ಎಸಗಿದ್ದಾಳೆ ಇಂತಹ ನೀಚ ಕೃತ್ಯ