Select Your Language

Notifications

webdunia
webdunia
webdunia
webdunia

ಓವರ್ ಟೇಕ್ ವಿಚಾರಕ್ಕೆ ಮುಸ್ಲಿಂ ವ್ಯಕ್ತಿ ಜೊತೆ ಮಾಜಿ ಸಂಸದ ಅನಂತಕುಮಾರ್ ಹೆಗ್ಡೆ ಗಲಾಟೆ

Anantkumar hegde
ನೆಲಮಂಗಲ: ಕಾರು ಓವರ್ ಟೇಕ್ ಮಾಡುವ ವಿಚಾರಕ್ಕೆ ಉತ್ತರ ಕನ್ನಡ ಮಾಜಿ ಸಂಸದ ಅನಂತಕುಮಾರ್ ಹೆಗ್ಡೆ ಮತ್ತು ಬೆಂಬಲಿಗರು ಮುಸ್ಲಿಮರ ಜೊತೆ ಗಲಾಟೆ ಮಾಡಿಕೊಂಡಿದ್ದು ಎಫ್ಐಆರ್ ದಾಖಲಾಗಿದೆ.

ನೆಲಮಂಗಲ ಬಳಿ ರಾಷ್ಟ್ರೀಯ ಹೆದ್ದಾರಿ ಬಳಿ ತಮ್ಮ ಬೆಂಬಲಿಗರ ಜೊತೆ ಅನಂತಕುಮಾರ್ ಹೆಗ್ಡೆ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಮುಸ್ಲಿಮರ ಗುಂಪೊಂದು ಕಾರು ಓವರ್ ಟೇಕ್ ಮಾಡಿತ್ತು. ಬಳಿಕ ದಾಬಸ್ ಪೇಟೆ ಬಳಿ ಅನಂತ್ ಕುಮಾರ್ ಇದ್ದ ಕಾರು ಮುಸ್ಲಿಮ್ ವ್ಯಕ್ತಿಗಳಿದ್ದ ಕಾರನ್ನು ತಡೆದಾಗಿ ಎರಡೂ ಗುಂಪುಗಳ ನಡುವೆ ಗಲಾಟೆಯಾಗಿದೆ.

ಇನ್ನು ಅನಂತಕುಮಾರ್ ಹೆಗ್ಡೆ ಜೊತೆ ಗಲಾಟೆಯಾಗಿದೆ ಎಂದು ತಿಳಿದ ತಕ್ಷಣ ನೂರಾರು ಸಂಖ್ಯೆಯಲ್ಲಿ ಮುಸ್ಲಿಮರ ಗುಂಪು ದಾಬಸ್ ಪೇಟೆ ಠಾಣೆ ಬಳಿ ಜಮಾಯಿಸಿದೆ. ಇದನ್ನು ತಿಳಿದು ಬಿಜೆಪಿ ಕಾರ್ಯಕರ್ತರೂ ಜಮಾಯಿಸಿದ್ದಾರೆ.

ಬಳಿಕ ಸ್ವತಃ ಅನಂತಕುಮಾರ್ ಹೆಗ್ಡೆ ಠಾಣೆಗೆ ಬಂದು ಘಟನೆ ಬಗ್ಗೆ ವಿವರಿಸಿದ್ದಾರೆ. ಇನ್ನು ಘಟನೆ ಬಗ್ಗೆ ಅನಂತಕುಮಾರ್ ವಿರುದ್ಧ ಎಫ್ಐಅರ್ ದಾಖಲಾಗಿದೆ. ಅನಂತ್ ಬೆಂಬಲಿಗರಿಂದ ಹಲ್ಲೆ ನಡೆದ ಪರಿಣಾಮ ಇನ್ನೊಂದು ಕಾರಿನಲ್ಲಿದ್ದ ಕೆಲವರಿಗೆ ಗಾಯಗಳಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ ಪಾಕಿಸ್ತಾನದಂತೆ ಇಸ್ರೇಲ್ ಇರಾನ್ ನಡುವೆ ಕದನ ವಿರಾಮ ಘೋಷಿಸಿದ ಟ್ರಂಪ್: ಆದರೆ ಆಗಿದ್ದೇನು