Select Your Language

Notifications

webdunia
webdunia
webdunia
webdunia

MLA ಶ್ರೀನಿವಾಸ್ ಮೂರ್ತಿ ಸೋದರಿ ವಿರುದ್ಧ FIR

FIR against sister of mlA Srinivas Murthy
ಪುಲಕೇಶಿನಗರ , ಮಂಗಳವಾರ, 28 ಫೆಬ್ರವರಿ 2023 (20:33 IST)
ಪುಲಕೇಶಿನಗರ ಕಾಂಗ್ರೆಸ್​​​​​ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಸಹೋದರಿ ಚಂದ್ರಕಲಾ ಸೇರಿದಂತೆ ಐವರ ವಿರುದ್ದ FIR ದಾಖಲಾಗಿದೆ.. ಲಗ್ಗೆರೆಯ ನಿವಾಸಿ ಮಹೇಶ್ ಮೇಲೆ ಮಾರಣಾಂತಿಕ ಹಲ್ಲೆ ಆರೋಪ ಹಿನ್ನೆಲೆಯಲ್ಲಿ ರಾಜಗೋಪಾನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಲಗ್ಗರೆಯ ನಿವಾಸಿ ಮಹೇಶ್ ಮತ್ತು ಪತ್ನಿ ಶಿಲ್ಪಾ ನಡುವೆ ಕೌಟುಂಬಿಕ ಕಲಹವಿದ್ದು, ಈ ಹಿನ್ನೆಲೆ ರಾಜೀ ಪಂಚಾಯತಿ ಮಾಡಲು ಚಂದ್ರಕಲಾ ಮತ್ತು ಇತರರು ತೆರಳಿದ್ದರು.. ಚಂದ್ರಕಲಾ ಹಾಗೂ ಭಾಗ್ಯಮ್ಮ, ಸುನೀತ ಮತ್ತು ಕಾರು ಚಾಲಕ ಸೇರಿ ಮಹೇಶ್​​ನನ್ನು ಕೋಣೆಯೊಳಗೆ ಕೂಡಿಹಾಕಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಫೆಬ್ರವರಿ 23ರ ಸಂಜೆ 4 ಗಂಟೆ ವೇಳೆಗೆ ಲಗ್ಗೆರೆಯಲ್ಲಿ ಈ ಘಟನೆ ನಡೆದಿದ್ದು, ಗಾಯಾಳು ಮಹೇಶ್​ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮಹೇಶ್ ಸೋದರ ರಾಜು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಅಗ್ನಿಪಥ್ ಸಿಂಧುತ್ವ ಎತ್ತಿ ಹಿಡಿದ ಕೋರ್ಟ್​​​​