Publish Date: Sat, 17 Dec 2022 (18:40 IST)
Updated Date: Sat, 17 Dec 2022 (18:43 IST)
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಳೆಯ ಔಷಧಿಗಳ ದಾಸ್ತಾನು ಪತ್ತೆಯಾಗಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನವಲಹಳ್ಳಿಯ ಪ್ರಾಥಮಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ 2017 ನೇ ವರ್ಷದ ಡೇಟ್ ಇರುವ ಔಷಧಿ ದಾಸ್ತಾನು ಪತ್ತೆಯಾಗಿದ್ದು, ಆರೋಗ್ಯ ಕೇಂದ್ರದ ಸಂರಕ್ಷಣಾ ಅಧಿಕಾರಿಯಾಗಿದ್ದ ಸುವರ್ಣ ಹಿರೇಮಠ್ ಕರ್ತವ್ಯ ಲೋಪ ಮಾಡಿದ್ದಾರೆ
ಸದ್ಯ ಸುವರ್ಣ ಹಿರೇಮಠ್ ವರ್ಗಾವಣೆ ಮಾಡಲಾಗಿದೆ. ನಿನ್ನೆ ಅಧಿಕಾರಿ ಜೊತೆಗೆ ಗ್ರಾಮಸ್ಥರು ಆರೋಗ್ಯ ಕೇಂದ್ರದ ಕೊಠಡಿಗೆ ಭೇಟಿ ನೀಡಿದಾಗ ದಾಸ್ತಾನು ಮಾಡಿದ್ದ ಹಳೆಯ ಔಷಧಿಗಳು ಪತ್ತೆಯಾಗಿದ್ದವು. ಸುವರ್ಣ ಹಿರೇಮಠ್ ಹಾಗೂ ಸಂಬಂಧಿಸಿದವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ವಿನಯಕುಮಾರ್ ತಿಳಿಸಿದ್ದಾರೆ..