Select Your Language

Notifications

webdunia
webdunia
webdunia
webdunia

ಜೈ ಜವಾನ್‌, ಜೈ ಕಿಸಾನ್‌, ಜೈ ವಿಜ್ಞಾನ್‌ ,ಜೈ ಅನುಸಂಧಾನ್‌ ಎಂಬ ಘೋಷಣೆ ಮಾಡಿದ ವಿತ್ತಸಚಿವೆ

ನಿರ್ಮಲಾ ಸೀತರಾಮನ್‌

geetha

ನವದೆಹಲಿ , ಶುಕ್ರವಾರ, 2 ಫೆಬ್ರವರಿ 2024 (16:34 IST)
ನವದೆಹಲಿ-ಲೋಕಸಭಾ ಚುನಾವಣೆಗೂ ಮುನ್ನ ಈ ಅವಧಿಯ ಕೊನೆಯ ಮಧ್ಯಂತರ ಬಜೆಟ್‌ ನ್ನ ಮಂಡಿಸಲಾಗಿದೆ. ಈ ವೇಳೆ ಜೈ ಜವಾನ್‌, ಜೈ ಕಿಸಾನ್‌, ಜೈ ವಿಜ್ಞಾನ್‌ ,ಜೈ ಅನುಸಂಧಾನ್‌ ಎಂಬ ಘೋಷಣೆ ಮಾಡಿದ ವಿತ್ತಸಚಿವೆ ನಿರ್ಮಲಾ ಸೀತರಾಮನ್‌,  ಕೃಷಿ ಕ್ಷೇತ್ರಕ್ಕೆ ಬಿಜೆಪಿ ಅವಧಿಯಲ್ಲಿ ನೀಡಿದ ಕೊಡುಗೆಗಳನ್ನು ಬಣ್ಣಿಸಿದರು. 
 
ಎಣ್ಣೆ ಕಾಳುಗಳ ಉತ್ಪಾದನೆಯಲ್ಲಿ ಆತ್ಮನಿರ್ಭರತೆಯನ್ನು ಸಾಧಿಸಿದ್ದೇವೆ. 
ಕಿಸಾನ್‌ ಸಂಪದ ಯೋಜನೆಯ ಅಡಿಯಲ್ಲಿ 38 ಕೋಟಿ ರೈತರು ಲಾಭ ಪಡೆದಿದ್ದಾರೆ. 
11.8 ಕೋಟಿ ರೈತರಿಗೆ ಕಿಸಾನ್‌ ಸಮ್ಮಾನ್‌ ಯೋಜನೆಯ ಲಾಭ ದೊರೆತಿದೆ. 
4 ಕೋಟಿಗೂ ಹೆಚ್ಚು ರೈತರಿಗೆ ಫಸಲ್‌ ಬಿಮಾ ಯೋಜನೆಯಿಂದ ಪರಿಹಾರ ಸಿಕ್ಕಿದೆ. 
ಕಳೆದ ಹತ್ತು ವರ್ಷದ ಬಿಜೆಪಿ ಆಡಳಿತದ ಅವಧಿಯಲ್ಲಿ 25 ಕೋಟಿ ರೈತರು ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ. 
ಆಯುಷ್ಮಾನ್‌ ಭಾರತ್‌ ಯೋಜನೆಯನ್ನು ಆಶಾ ಕಾರ್ಯಕರ್ತೆಯರಿಗೂ ವಿಸ್ತರಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗ್ಯಾಸ್‌ ಸಿಲಿಂಡರ್‌ ಬೆಲೆ ಹೆಚ್ಚಳ!