Publish Date: Fri, 05 Jan 2018 (10:21 IST)
Updated Date: Fri, 05 Jan 2018 (10:23 IST)
ಬೆಂಗಳೂರು: ಆಗಾಗ ಬಲಪಂಥೀಯರ ವಿರುದ್ಧ ಕಿಡಿ ಕಾರುವ ಪ್ರಕಾಶ್ ರೈ ಇದೀಗ ಬಿಜೆಪಿ ಕಾರ್ಯಕರ್ತ ದೀಪಕ್ ಹತ್ಯೆ ಬಗ್ಗೆ ತುಟಿ ಪಿಟಕ್ ಎಂದಿಲ್ಲ ಎಂಬ ಟೀಕೆಗಳಿಗೆ ತೆರೆ ಎಳೆದಿದ್ದಾರೆ.
ಪ್ರಕಾಶ್ ರೈ ಈ ಬಗ್ಗೆ ಪ್ರತಿಕ್ರಿಯಿಸಿದ್ದು ‘ಕೊಲೆಯಾದವರು ಯಾವುದೇ ಪಕ್ಷಕ್ಕೆ ಸೇರಿರಲಿ. ಅದು ರಾಕ್ಷಸ ಕೃತ್ಯ. ಕೊಲೆಗಾರರು ಯಾವುದೇ ಸಂಘಟನೆಗೆ ಸೇರಿದವರಿರಲಿ ಅವರು ರಾಕ್ಷಸರೇ. ಇದೊಂದು ಹೀನ ಕೃತ್ಯ’ ಎಂದು ಪ್ರಕಾಶ್ ರೈ ಹೇಳಿದ್ದಾರೆ.
ಗೌರಿ ಲಂಕೇಶ್ ಹತ್ಯೆಯಾದಾಗ, ದಲಿತ ಯುವತಿ ದಾನಮ್ಮ ಹತ್ಯೆಯಾದಾಗ ಬಲಪಂಥೀಯರ ವಿರುದ್ಧ ಕಿಡಿ ಕಾರಿದ್ದ ಪ್ರಕಾಶ್ ರೈ ದೀಪಕ್ ಹತ್ಯೆಯಾದಾಗ ಯಾಕೆ ಸುಮ್ಮನಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗಳು ಬಂದಿದ್ದವು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ