Publish Date: Mon, 07 Jan 2019 (17:29 IST)
Updated Date: Mon, 07 Jan 2019 (17:33 IST)
ದಲಿತ ಚಳುವಳಿ ಹೋರಾಟಗಾರ ಮುನಿಸ್ವಾಮಿಯವರ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣ ಯಶಸ್ವಿಯಾಯಿತು.
ಕೋಲಾರದಲ್ಲಿ ದಲಿತ ಚಳುವಳಿ ಹೋರಾಟಗಾರ ಮುನಿಸ್ವಾಮಿಯವರ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು.
ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ದಲಿತ ಚಳುವಳಿ ಹೋರಾಟಗಾರ ಎ.ಮುನಿಸ್ವಾಮಿಯವರ ಬದುಕು-ಬರಹ-ಹೋರಾಟ ಕುರಿತು ವಿಚಾರ ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಮುಖ್ಯ ಆತಿಥಿಯಾಗಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಭಾಗವಹಿಸಿದ್ದರು.
ದಲಿತ ಚಳುವಳಿಯಲ್ಲಿ ಎ.ಮುನಿಸ್ವಾಮಿ ನಿರ್ವಹಿಸಿದ ಪಾತ್ರ, ಹೋರಾಟ ಕುರಿತು ಸ್ಪೀಕರ್ ಕೆ.ಅರ್ ರಮೇಶ್ ಕುಮಾರ್ ಮಾತನಾಡಿದರು. ಇನ್ನು ಕಾರ್ಯಕ್ರಮದಲ್ಲಿ ದಲಿತ ಪರ ಸಂಘಟನೆ ಮುಖಂಡರು, ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಸೇರಿದಂತೆ ಜನ್ರು ಭಾಗವಹಿಸಿದ್ರು.