Publish Date: Mon, 07 Jan 2019 (16:05 IST)
Updated Date: Mon, 07 Jan 2019 (16:07 IST)
ತುಮಕೂರು ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಶಿವಕುಮಾರ ಸ್ವಾಮೀಜಿಯವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಶ್ರೀಗಳ ಆಪ್ತ ವೈದ್ಯ ಡಾ. ಪರಮೇಶ್ ಹೇಳಿದ್ದಾರೆ.
ಶ್ರೀಗಳಿಗೆ ಇನ್ನು ಬಹಳಷ್ಟು ಚಿಕಿತ್ಸೆ ನೀಡಬೇಕಾಗಿದೆ. ಶ್ರೀಗಳು ಗುಣಮುಖರಾಗಲು ಬಹಳಷ್ಟು ಸಮಯಬೇಕು ಎಂದು ಅವರು ಸಿದ್ದಗಂಗಾ ಆಸ್ಪತ್ರೆಯಲ್ಲಿ ಶ್ರೀಗಳ ಆರೋಗ್ಯ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದರು.
ಶ್ರೀಗಳಿಗೆ ಸಾಧ್ಯವಾದಷ್ಟು ಚಕಿತ್ಸೆ ನೀಡುತ್ತಿದ್ದೇವೆ. ಚಿಕಿತ್ಸೆ ಫಲಕಾರಿಯಾಗುವ ವಿಶ್ವಾಸವಿದೆ ಎಂದ ಅವರು, ಆಂಟಿಬಯೋಟಿಕ್ ಹೆಚ್ಚು ಮಾಡಿದ್ದರಿಂದ ಶ್ವಾಸಕೋಶದ ಸೋಂಕು ಕೂಡ ಕಡಿಮೆಯಾಗಿದೆ. ಪ್ರೋಟೀನ್ ಅಂಶ ಸಹ ಜಾಸ್ತಿಯಾಗಿದೆ ಎಂದರು. ಶ್ರೀಗಳು ಮಾತನಾಡುತ್ತಿದ್ದು, ಕಣ್ಣು ಬಿಟ್ಟು ನೋಡುತ್ತಿದ್ದಾರೆ ಎಂದರು.