ಕುರುಬ ಸಮಯದಾಯಕ್ಕೆ ಸುಳ್ಳು ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ಕೊಡುವುದನ್ನು ವಿರೋಧಿಸಿ ಅಕ್ಟೋಬರ್ 16 ರಂದು ವಾಲ್ಮೀಕಿ ನಾಯಕರ ಸಂಘವು ಹಮ್ಮಿಕೊಂಡ ಪ್ರಾದೇಶಿಕ ಆಯುಕ್ತರ ಕಚೇರಿ ಮುತ್ತಿಗೆ ಹೋರಾಟ ಕೂಡಲೇ ಹಿಂಪಡೆಯಬೇಕು ಎಂಬ ಆಗ್ರಹ ಕೇಳಿಬಂದಿದೆ.
ಇಲ್ಲದಿದ್ದರೆ ನಾಯ್ಕಾಡ ಜನಾಂಗದ ಹೆಸರಿನಲ್ಲಿ ಎಸ್ಟಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವುದರ ವಿರುದ್ಧ ನವೆಂಬರ್ ಮೊದಲ ವಾರದಲ್ಲಿ ಎಂಟು ಜಿಲ್ಲೆಗಳ ಗೊಂಡ ಸಮಾಜ ಬಾಂಧವರು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕಲಬುರಗಿ ಜಿಲ್ಲಾ ಗೊಂಡ, ಕಾಡು ಕುರುಬ ಸಂಘದ ಅಧ್ಯಕ್ಷ ಮಹಾಂತೇಶ್ ಎಸ್. ಕೌಲಗಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಸಮಾಜದ ಗುರುಗಳು ಸಹ ಜಾತಿವಾದ ಬೆಂಬಲಿಸುವ ಹೇಳಿಕೆ ನೀಡಿದ್ದು ಸರಿಯಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ದೇವೇಂದ್ರಪ್ಪ ಮರತೂರ್, ಬೈಲಪ್ಪ ನೆಲೋಗಿ, ಲಕ್ಷ್ಮಣರಾವ್ ಪೋಲಿಸ್ ಪಾಟೀಲ್, ನಿಂಗಪ್ಪಾ ಹೇರೂರ್, ಶಿವಕುಮಾರ್ ಬೆಳಕೇರಿ, ಹೈಯ್ಯಾಳಪ್ಪ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.