Select Your Language

Notifications

webdunia
webdunia
webdunia
Sunday, 6 April 2025
webdunia

ಅಪ್ಪಂದಿರ ದಿನದ ಸ್ಪೆಷಲ್:ನಿಮ್ಮ ಹೆಗಲಿಗೆ ಹೆಗಲು ಕೊಡುವ ತಂದೆಗೆ ಯಾವತ್ತಾದ್ರೂ ಥ್ಯಾಂಕ್ಸ್ ಹೇಳಿದ್ದೀರಾ?

ಅಪ್ಪಂದಿರ ದಿನ
ಬೆಂಗಳೂರು , ಭಾನುವಾರ, 19 ಜೂನ್ 2022 (08:20 IST)
ಬೆಂಗಳೂರು: ಸಾಮಾನ್ಯವಾಗಿ ನಾವು ಅಮ್ಮಂದಿರ ತ್ಯಾಗದ ಬಗ್ಗೆ, ಅವಳ ಕರುಣೆಯ ಬಗ್ಗೆ ಮಾತನಾಡುತ್ತೇವೆ. ಆದರೆ ಅಪ್ಪಂದಿರನ್ನು ಮರೆತೇ ಬಿಡುತ್ತೇವೆ.

ನಮ್ಮ ಕಷ್ಟಗಳಿಗೆ ಹೆಗಲುಕೊಡುವ, ನಮ್ಮ ಎದುರಿಗೆ ಏನೂ ತೋರಿಸಿಕೊಳ್ಳದೇ ಇದ್ದರೂ ನಮಗಾಗಿ ಮಿಡಿಯುವ, ಅಗತ್ಯ ಬಂದಾಗ ರಕ್ಷಕನಂತೆ ನಿಲ್ಲುವ ಅಪ್ಪಂದಿರ ದಿನ ಇಂದು.

ಅಮ್ಮನಂತೇ ಅಪ್ಪ ಯಾವುದನ್ನೂ ಬಹಿರಂಗವಾಗಿ ಹೇಳಿಕೊಳ್ಳಲ್ಲ. ಆದರೆ ನಮಗೆ ಅಗತ್ಯ ಬಂದಾಗ, ಬೇಕಾಗಿದ್ದನ್ನೆಲ್ಲಾ ಕೊಡಿಸಿ ನಮ್ಮ ಕಷ್ಟಕ್ಕೆ ಜೊತೆಯಾಗಿ ನಿಲ್ಲುವ ಮೊದಲ ಹೀರೋ ಅಪ್ಪ. ಅಂತಹ ಎಲ್ಲಾ ಅಪ್ಪಂದಿರಿಗೆ ಅಪ್ಪಂದಿರ ದಿನದ ಶುಭಾಷಯಗಳು. ಸಾಧ‍್ಯವಾದರೆ ಅವರಿಗೊಂದು ಥ್ಯಾಂಕ್ಸ್ ಹೇಳಿ. ಅವರು ನಿರೀಕ್ಷೆ ಮಾಡದೇ ಇದ್ದರೂ, ನೀವು ಕೊಡುವ ಪ್ರೀತಿಗೆ ಒಳಗೊಳಗೇ ಖುಷಿಪಡುವ ಜೀವ ಎಂಬುದನ್ನು ಮರೆಯಬೇಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಪರಿಷ್ಕೃತ ಪಠ್ಯ ಪುಸ್ತಕದ ಪ್ರತಿಯನ್ನು ಹರಿದು ಹಾಕಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ