Select Your Language

Notifications

webdunia
webdunia
webdunia
webdunia

ಕಾಫಿ ಕೊಯ್ಲಿನ ಬಗ್ಗೆ ಸುಳ್ಳು ಲೆಕ್ಕ ಕೊಟ್ಟಿದ್ದಕ್ಕೆ ಮಗನನ್ನೇ ಕೊಂದ ತಂದೆ

ಕಾಫಿ ಕೊಯ್ಲಿನ ಬಗ್ಗೆ ಸುಳ್ಳು ಲೆಕ್ಕ ಕೊಟ್ಟಿದ್ದಕ್ಕೆ ಮಗನನ್ನೇ ಕೊಂದ ತಂದೆ
ಹಾಸನ , ಭಾನುವಾರ, 17 ಫೆಬ್ರವರಿ 2019 (09:01 IST)
ಹಾಸನ : ಕಾಫಿ ಕೊಯ್ಲಿನ ಬಗ್ಗೆ ಸುಳ್ಳು ಲೆಕ್ಕ ಕೊಟ್ಟಿದ್ದಕ್ಕೆ ತಂದೆಯೇ ಮಗನ ಮೇಲೆ ಗುಂಡು ಹಾರಿಸಿ ಕೊಂದ ಘಟನೆ ಹಾಸನದ ಬೇಲೂರಿನ ಸುಳಗಳಲೆ ಗ್ರಾಮದಲ್ಲಿ ನಡೆದಿದೆ.


ಬಸವರಾಜು ಗೊಂಡು ಹಾರಿಸಿದ ತಂದೆ. ಪ್ರಶಾಂತ್ (37) ಮೃತ ದುರ್ದೈವಿ. ಮಗ ಪ್ರಶಾಂತ್ ಕಾಫಿ ಕೊಯ್ಲು ಮಾಡಿ ನಾಲ್ಕು ಚೀಲ ಲೆಕ್ಕ ಕೊಡದೆ ಯಾಮಾರಿಸಿದ್ದ. ಇದರಿಂದ ಕೋಪಗೊಂಡ ತಂದೆ ತನ್ನ ಬಂದೂಕಿನಿಂದ ಮಗನ ಎದೆಗೆ ಫೈರಿಂಗ್ ಮಾಡಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗ ಸಾವನಪ್ಪಿದ್ದಾನೆ.


ಈ ಘಟನೆ ಸಂಬಂಧ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌ ಇತ್ತ ಘಟನೆಯ ಬಳಿಕ ಆರೋಪಿ ತಂದೆ ಬಸಪ್ಪಗೌಡ ಪರಾರಿಯಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಉಗ್ರರ ದಾಳಿ: ಯೋಧರ ಕುಟುಂಬಗಳ ಸಂಪೂರ್ಣ ಜವಾಬ್ದಾರಿ ಹೊತ್ತ ರಿಲಯನ್ಸ್ ಫೌಂಡೇಶನ್