Webdunia - Bharat's app for daily news and videos

Install App

ಗುಡ್ ಫ್ರೈಡೇ ಮನೆಯಲ್ಲೇ ಪ್ರಾರ್ಥಿಸಿ ಎಂದ ಫಾದರ್

Webdunia
ಗುರುವಾರ, 9 ಏಪ್ರಿಲ್ 2020 (19:21 IST)
ಲಾಕ್‌ಡೌನ್‌ ಹಿನ್ನೆಲೆಯಲ್ಲಿ ‘ಶುಭ ಶುಕ್ರವಾರ’ (ಗುಡ್ ಫ್ರೈಡೇ)ವನ್ನು ಮನೆಯಲ್ಲೇ ಆಚರಿಸಬೇಕು.

ಹೀಗಂತ ಕ್ರೈಸ್ತ ಸಮುದಾಯಕ್ಕೆ ಆರ್ಚ್‌ ಬಿಷಪ್‌ ಡಾ.ಪೀಟರ್‌ ಮಚಾಡೊ ಮನವಿ ಮಾಡಿದ್ದು, ಅದರಂತೆ ಹಾವೇರಿ ಜಿಲ್ಲಾದ್ಯಂತ ಕ್ರೈಸ್ತ ಸಮುದಾಯದವರು ಸಾಮೂಹಿಕ ಪಾರ್ಥನೆ ಬದಲು ಮನೆಯಲ್ಲೇ ವೈಯಕ್ತಿಕವಾಗಿ ಪ್ರಾರ್ಥನೆ ಮಾಡಲು ಸೂಚಿಸಲಾಗಿದೆ ಎಂದು ಹಾವೇರಿಯ ಸೇಂಟ್‌ ಆ್ಯನ್ಸ್‌ ಚರ್ಚ್‌ನ ಫಾದರ್‌ ಮಾರ್ಟಿನ್‌ ವಾಜ್‌ ಪ್ರೀಸ್ಟ್‌ ತಿಳಿಸಿದ್ದಾರೆ.

ಕೊರೊನಾ ವೈರಾಣು ತಡೆಗಟ್ಟುವ ಉದ್ದೇಶದಿಂದ ಹಾಗೂ ಕೊರೊನಾ ವಿರುದ್ಧದ ಹೋರಾಟವನ್ನು ಬೆಂಬಲಿಸಿ ಮಾರ್ಚ್‌ 24 ರಿಂದ ಜಿಲ್ಲೆಯಲ್ಲಿರುವ ಚರ್ಚ್‌ಗಳು ಬಾಗಿಲು ತೆರೆದಿಲ್ಲ. ವಿವಿಧ ಆಚರಣೆಗಳ ವಿಡಿಯೋಗಳು ಯೂಟ್ಯೂಬ್ ಮೂಲಕ ಪ್ರಸಾರವಾಗಲಿವೆ. ಅದನ್ನು ವೀಕ್ಷಿಸಿ, ಪ್ರಾರ್ಥನೆ ಮತ್ತು ವಿಧಿ ವಿಧಾನಗಳನ್ನು ಪಾಲಿಸಲು ಸಮುದಾಯದವರು ತೀರ್ಮಾನ ಕೈಗೊಂಡಿದ್ದಾರೆ ಎಂದರು.

ಕೊರೊನಾ ನಿವಾರಣೆಗೆ ಪ್ರಾರ್ಥನೆ:  ದೇಶದ ಪ್ರಧಾನಿ ನರೇಂದ್ರ ಮೋದಿಯವರ ಕರೆಯನ್ನು ಬೆಂಬಲಿಸಿ, ಕೊರೊನಾ ಸೋಂಕು ತಡೆಗಟ್ಟಲು ಚರ್ಚ್‌ಗಳ ಬಾಗಿಲು ತೆರೆಯದೆ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ. ಶಿಲುಬೆಯಲ್ಲಿ ನುಡಿದ ಸಪ್ತ ವಾಕ್ಯಗಳ ಧ್ಯಾನ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments