Publish Date: Sun, 06 Oct 2019 (13:08 IST)
Updated Date: Sun, 06 Oct 2019 (13:11 IST)
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತಕ್ಷೇತ್ರದಲ್ಲಿ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸಾಲಭಾಧೆ ಮತ್ತು ಪ್ರವಾಹ ಸಂತ್ರಸ್ಥನಾಗಿದ್ದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಮೋಘಸಿದ್ಧ ಬಾಬು ಕಬ್ಬೂರ (45) ಮೃತ ದುರ್ದೈವಿ.
ಕಬ್ಬಿಗೆ ಹೊಡೆಯುವ ಔಷಧಿ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ರೈತ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದ ರೈತನಾಗಿರೋ ಅಮೋಘಸಿದ್ಧ, ಅಥಣಿ ಸಿಂಡಿಕೇಟ್ ಬ್ಯಾಂಕ್ ಹಾಗೂ ಖಾಸಗಿ ಬ್ಯಾಂಕ್ ಮತ್ತು ಲೇವಾದೇವಿದಾರರಲ್ಲಿ ಸಾಲ ಮಾಡಿದ್ದನು.
ಪಿಕೆಪಿಎಸ್ ನಲ್ಲಿ ಮೂವತ್ತು ಸಾವಿರ ಸಾಲ ಮಾಡಿಕೊಂಡಿದ್ದನು. ಅಥಣಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.