Select Your Language

Notifications

webdunia
webdunia
webdunia
webdunia

ಸ್ಯಾಂಟ್ರೋ ರವಿ ಪತ್ನಿ ವಿರುದ್ಧ ಸುಳ್ಳು ಕೇಸ್ ದಾಖಲು- ತನಿಖೆ ನಡೆಸುತ್ತಿರುವ ಪೊಲೀಸರು

False case registered against Santro Ravi's wife- Police investigating
bangalore , ಶುಕ್ರವಾರ, 27 ಜನವರಿ 2023 (19:06 IST)
ಸ್ಯಾಂಟ್ರೊ ರವಿ ಪತ್ನಿ ವಿರುದ್ದ ಸುಳ್ಳು ಪ್ರಕರಣ ದಾಖಲಿಸಿಕೊಂಡಿದ್ದ ಆರೋಪ ಹಿನ್ನೆಲೆ ಅಮಾನತುಗೊಂಡಿರುವ ಕಾಟನ್ ಪೇಟೆ ಇನ್ ಸ್ಪೆಕ್ಟರ್  ಆಗಿದ್ದ ಪ್ರವೀಣ್ ಹೇಳಿಕೆ ದಾಖಲಿಸಿಕೊಂಡಿದ್ದು ಈ ಸಂಬಂಧ ಅಂತಿಮ ಹಂತದಲ್ಲಿದ್ದು ಶೀಘ್ರದಲ್ಲಿ ವರದಿ ಸಲ್ಲಿಸುವುದಾಗಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಅಪರಾಧ ಪ್ರಕರಣವೊಂದರಲ್ಲಿ ಬಂಧಿತನಾಗಿ ಸಿಐಡಿ ವಶದಲ್ಲಿರುವ ಸ್ಯಾಂಟ್ರೊ ರವಿ ಪತ್ನಿ ವಿರುದ್ದ ಸುಳ್ಳು ಕೇಸ್ ದಾಖಲಿಸಿಕೊಂಡಿರುವುದು ಮೆಲ್ನೋಟಕ್ಕೆ ತಿಳಿದುಬಂದಿತ್ತು‌. ಈ ಸಂಬಂಧ ತನಿಖೆ ನಡೆಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿತ್ತು.‌ ಈ ಸಂಬಂಧ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದು ಸ್ಯಾಂಟ್ರೊ ರವಿ ಪತ್ನಿ ಹಾಗೂ ಅಮಾನತುಗೊಂಡಿರುವ ಇನ್ ಸ್ಪೆಕ್ಟರ್ ಅವರ ವಿಚಾರಣೆ ನಡೆಸಲಾಗಿದ್ದು ಶೀಘ್ರದಲ್ಲೇ ಅಂತಿಮ ವರದಿ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.
ಸ್ಯಾಂಟ್ರೋ ರವಿ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿರುವ ಸಂಬಂಧ ಈ ಬಗ್ಗೆ ನನಗೆ ಮಾಹಿತಿಯಿಲ್ಲ.. ಇದು ಸಿಐಡಿ ಪೊಲೀಸರೇ ಅಧಿಕೃತಗೊಳಿಸಬೇಕಿದೆ.ಸಿಐಡಿ ವಶದಲ್ಲಿರುವ ಸ್ಯಾಂಟ್ರೋ ರವಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಮೊದಲೇ ಬಿಪಿ ಶುಗರ್ ನಿಂದ ಬಳಲುತ್ತಿದ್ದ ರವಿ ನಿನ್ನೆ ಹೆಚ್ಚು ಮಾತ್ರೆ ನುಂಗಿ ಸಮಸ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ. ಸಿಐಡಿ ಅಧಿಕಾರಿಗಳು ರಾತ್ರಿಯೇ ರವಿಯನ್ನ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ರವಿಯನ್ನ ವಿಕ್ಟೊರಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ‌. ಶುಗರ್ ನಲ್ಲಿ ಏರುಪೇರಾಗಿದೆ ಎಂದು ವೈದ್ಯರು ತಿಳಿಸಿದ್ದಾರೆಂದು ಸಿಐಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಿ ಎಸ್ ಐ ಹಗರದಗ ಕಿಂಗ್ ಪಿನ್ ಮಾಹಿತಿ ಕಲೆಹಾಕಿದ ಸಿಐಡಿ