Publish Date: Tue, 26 Sep 2023 (15:00 IST)
Updated Date: Tue, 26 Sep 2023 (13:40 IST)
ಸೇವಂತಿ ಹೂವಿನ ದರ ಕುಸಿತ ಹಿನ್ನಲೆ ಬೆಳೆದ ಹೂವನ್ನು ಸ್ವತಃ ರೈತ ನಾಶ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಕಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸೇವಂತಿ ಹೂ ಬೆಳೆದು ರೈತನ ಬದುಕು ಬೀದಿಗೆ ಬಿದ್ದಿದೆ. ಪಾಂಡವಪುರ ಮತ್ತು ಕೆ.ಆರ್.ಪೇಟೆ ಭಾಗದಲ್ಲಿ ಹೂ ಕೃಷಿ ಮಾಡಿದ ರೈತ ಕುಟುಂಬಗಳು ಕಂಗಾಲಾಗಿವೆ. ಸೇವಂತಿ ಹೂವಿನ ದರ ಕುಸಿತವಾದ್ದರಿಂದ ರೈತ ಕಂಗಾಲಾಗಿ ಬೆಳೆದ ಹೂವಿನ ಬೆಳೆಯನ್ನು ನಾಶ ಮಾಡಿದ್ದಾನೆ. ಹೂ ಕೀಳಿಸಿದ ಕೂಲಿಯೂ ಸಿಗದ ಕಾರಣಕ್ಕೆ ರೈತ ಹೂವಿನ ಬೆಳೆ ನಾಶ ಮಾಡಿದ್ದಾನೆ. ಮಳೆ ಇಲ್ಲದೆ ಇತ್ತ ಬೆಳೆದ ಬೆಳೆಗೆ ಬೆಲೆಯೂ ಇಲ್ಲದೆ ಕಂಗಾಲಾಗಿದ್ದಾರೆ. ಯೋಗರಾಜ್ ಬೆಳೆದ ಬೆಳೆಗೆ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.