Select Your Language

Notifications

webdunia
webdunia
webdunia
webdunia

ನಕಲಿ ವೋಟರ್ ಐಡಿ ಹಾವಳಿ : ನಿಮ್ಮ ಕಾರ್ಡ್ ಚೆಕ್ ಮಾಡಿಕೊಳ್ಳಿ

ನಕಲಿ ವೋಟರ್ ಐಡಿ ಹಾವಳಿ : ನಿಮ್ಮ ಕಾರ್ಡ್ ಚೆಕ್ ಮಾಡಿಕೊಳ್ಳಿ
ಹಾವೇರಿ , ಮಂಗಳವಾರ, 6 ಅಕ್ಟೋಬರ್ 2020 (17:37 IST)
ಭಾರತ ಚುನಾವಣಾ ಆಯೋಗದಿಂದ ನೀಡುವ ಮತದಾರರ ಗುರುತಿನ ಪತ್ರವನ್ನು ನಕಲಿಯಾಗಿ ಸೃಷ್ಟಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಕೇಸ್ ಬಯಲಿಗೆ ಬಂದಿದೆ.

ಸೇವಾಸಿಂಧು ಸಾಮಾನ್ಯ ಸೇವಾ ಕೇಂದ್ರದಲ್ಲಿ(ಕಾಮನ್ ಸರ್ವಿಸ್ ಸೆಂಟರ್) ಒಂದರಲ್ಲಿ ಭಾರತ ಚುನಾವಣಾ ಆಯೋಗದಿಂದ ನೀಡುವ ಮತದಾರರ ಗುರುತಿನ ಪತ್ರವನ್ನು ನಕಲಿಯಾಗಿ ಸೃಷ್ಟಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿತ್ತು.

ಖಚಿತ ಮಾಹಿತಿಯನ್ನು ಆಧರಿಸಿ  ಹಾವೇರಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ ನೇತೃತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೆಲ ದಾಖಲೆಗಳನ್ನು ಯಂತ್ರೋಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಪರಿಶೀಲನೆ ನಡೆಸಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ, ನಕಲಿ ವೋಟರ್ ಐಡಿ ಸೃಷ್ಟಿಸುತ್ತಿರುವ ಕುರಿತ ಮಾಹಿತಿ ಆಧಾರದ ಮೇಲೆ ನಮ್ಮ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಎಷ್ಟು ಐಡಿಗಳನ್ನು ಸೃಷ್ಟಿಸಿದ್ದಾನೆ, ಇದರ ಮೂಲ ಕುರಿತಂತೆ ತನಿಖೆಯಿಂದ ಹೆಚ್ಚಿನ ವಿವರ ದೊರೆಯಲಿದೆ ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರೋ ರಾತ್ರಿ ಹತ್ರಾಸ್ ಸಂತ್ರಸ್ತೆಯ ಅಂತ್ಯಸಂಸ್ಕಾರ ಮಾಡಿದ್ದಕ್ಕೆ ಕಾರಣ ನೀಡಿದ ಯುಪಿ ಸರ್ಕಾರ