Select Your Language

Notifications

webdunia
webdunia
webdunia
webdunia

ಇಬ್ಬರ ಜೊತೆ ಸೇರಿ ಮಹಿಳೆರಿಯರಿಗೆ ಹೀಗಾ ಮಾಡೋದು?

ಇಬ್ಬರ ಜೊತೆ ಸೇರಿ ಮಹಿಳೆರಿಯರಿಗೆ ಹೀಗಾ ಮಾಡೋದು?
ಬೆಂಗಳೂರು , ಸೋಮವಾರ, 5 ಅಕ್ಟೋಬರ್ 2020 (16:27 IST)
ಆತ ಉತ್ತಮ ಸಂಬಳ ಬರುವ ಉದ್ಯೋಗದಲ್ಲಿದ್ದ. ಆದರೆ ಸಹವಾಸ ದೋಷ ಅನ್ನೋದು ಆತನಿಗೆ ಮುಳುವಾಗಿದೆ.

ಇಬ್ಬರು ಗೆಳೆಯರಾದ ಅರುಣ್ ಹಾಗೂ ಕಾರ್ತಿಕ್ ಜೊತೆಗೂಡಿದ ಜಯಕುಮಾರ್ ಎಂಬಾತ ಎಂಎನ್ ಸಿ ಕಂಪನಿಯಲ್ಲಿದ್ದ ಉದ್ಯೋಗ ಬಿಟ್ಟು ನೇರವಾಗಿ ಕಳ್ಳತನಕ್ಕೆ ಇಳಿದುಬಿಟ್ಟಿದ್ದಾನೆ.

ಅಷ್ಟೇ ಅಲ್ಲದೇ ಅಂತರಾಜ್ಯ ಕಳ್ಳನಾಗಿ ಕುಖ್ಯಾತಿ ಪಡೆದಿದ್ದಾರೆ. ಮಹಿಳೆಯರನ್ನು ಟಾರ್ಗೆಟ್ ಮಾಡಿ ಮಾಂಗಲ್ಯ ದೋಚಿದ್ದ ಜಯಕುಮಾರ್ ಎಂಬಾತನನ್ನು ಬೆಂಗಳೂರು ಉತ್ತರ ವಿಭಾಗದ ಪೊಲೀಸರು ಬಂಧನ ಮಾಡಿದ್ದು, ಆತನಿಂದ 3.7 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 2 ಬೈಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಳೆದೆರಡು ತಿಂಗಳ ಹಿಂದೆ ದ್ವಿಚಕ್ರ ವಾಹನದಲ್ಲಿ ಬಂದು ಸಿದ್ದಗಂಗಮ್ಮ ಎಂಬುವರ  ಕುತ್ತಿಗೆಯಲ್ಲಿದ್ದ 60 ಗ್ರಾಂ ಚಿನ್ನದ ಮಾಂಗಲ್ಯ ಸರ ಎಗರಿಸಿದ್ದನು.

ತಮಿಳುನಾಡು ಕೃಷ್ಣಗಿರಿಯ ಮೂಲದ ಆರೋಪಿ ಜಯ್ ಕುಮಾರ್ ಚಿನ್ನ ಕಿತ್ತುಕೊಂಡ ರಭಸಕ್ಕೆ ಸಿದ್ದಗಂಗಮ್ಮ ಬಿದ್ದು ಗಾಯಗೊಂಡಿದ್ದರು. ಕೇಸ್ ತನಿಖೆ ಕೈಗೊಂಡ ಪೊಲೀಸರು ಕುಖ್ಯಾತ ಸರಗಳ್ಳನನ್ನು ಬಂಧನ ಮಾಡಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ಉಪ್ಪು ತಿಂದ ಸಿದ್ದರಾಮಯ್ಯ ಉತ್ತರ ಕೊಡಲಿ ಎಂದ ಹೆಚ್.ಡಿ.ಕೆ