Select Your Language

Notifications

webdunia
webdunia
webdunia
webdunia

ನಕಲಿ ಛಾಪಾ ಕಾಗದ: ಅಬ್ದುಲ್ ಕರೀಂ ಲಾಲ್ ತೆಲಗಿ ನಿಧನ

ನಕಲಿ ಛಾಪಾ ಕಾಗದ: ಅಬ್ದುಲ್ ಕರೀಂ ಲಾಲ್ ತೆಲಗಿ ನಿಧನ
ಬೆಂಗಳೂರು , ಗುರುವಾರ, 26 ಅಕ್ಟೋಬರ್ 2017 (17:15 IST)
ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ರೂವಾರಿಯಾಗಿದ್ದ 56 ವರ್ಷ ವಯಸ್ಸಿನ ಅಬ್ದುಲ್ ಕರೀಂ ಲಾಲ್ ತೆಲಗಿ ನಿಧನ ಹೊಂದಿದ್ದಾರೆ.
ನಗರದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ತೆಲಗಿ ಹಲವು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು ಎಂದು ಮೂಲಗಳು ತಿಳಿಸಿವೆ.
 
ಸೌದಿ ಅರೇಬಿಯಾದಲ್ಲಿದ್ದ ತೆಲಗಿ ಮುಂಬೈಗೆ ಬಂದು ಕುಲಬಾದಲ್ಲಿ ಟ್ರಾವೆಲ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದನು. ಮೊದಲಿಗೆ ಕಡಲೆಕಾಯಿ ಮಾರಾಟ ಮಾಡುತ್ತಿದ್ದ ನಂತರ ಛಾಪಾ ಕಾಗದಕ್ಕೆ ಕೈ ಹಾಕಿದ್ದ ಎಂದು ಮೂಲಗಳು ತಿಳಿಸಿವೆ.
 
ನಕಲಿ ಛಾಪಾ ಕಾಗದ ಪ್ರಕರಣ ದೇಶಾದ್ಯಂತ ಕೋಲಾಹಲ ಸೃಷ್ಟಿಸಿತ್ತು. ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ತೆಲಗಿ ಇಂದು ಇಹಲೋಕ ತ್ಯಜಿಸಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಪತ್ನಿಗಾಗಿ ಎರಡನೇ ಪತ್ನಿಯನ್ನೇ ಕೊಂದ ಪತಿ ಮಹಾಶಯ..!?