Select Your Language

Notifications

webdunia
webdunia
webdunia
webdunia

ಮೊದಲ ಪತ್ನಿಗಾಗಿ ಎರಡನೇ ಪತ್ನಿಯನ್ನೇ ಕೊಂದ ಪತಿ ಮಹಾಶಯ..!?

ಮೊದಲ ಪತ್ನಿಗಾಗಿ ಎರಡನೇ ಪತ್ನಿಯನ್ನೇ ಕೊಂದ ಪತಿ ಮಹಾಶಯ..!?
ನವದೆಹಲಿ , ಗುರುವಾರ, 26 ಅಕ್ಟೋಬರ್ 2017 (17:10 IST)
ನವದೆಹಲಿ: ಎರಡು ದಿನದ ಹಿಂದೆ ವಾಯುವ್ಯ ದೆಹಲಿಯ ರೋಹಿಣಿಯಲ್ಲಿ ನಡೆದಿದ್ದ ಗೃಹಿಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ಬೆಳ್ಳಂಬೆಳಿಗ್ಗೆ ಪತಿ ಹಾಗೂ ಒಂದು ವರ್ಷದ ಮಗುವಿನೊಂದಿಗೆ ಕಾರಿನಲ್ಲಿ ಹೊರಟಿದ್ದ ಮಹಿಳೆಯ ಹತ್ಯೆ ನಡೆದಿತ್ತು. ದುಷ್ಕರ್ಮಿಗಳು ತನ್ನ ಹಾಗೂ ಮಗುವಿನ ಎದುರಲ್ಲೇ ತನ್ನ ಪತ್ನಿ ಪ್ರಿಯಾ ಮೆಹ್ರಾಳನ್ನು ಕೊಂದಿರುವುದಾಗಿ ಪತಿ ಪಂಕಜ್ ಮೆಹ್ರಾ ಪೊಲೀಸರಿಗೆ ದೂರು ನೀಡಿದ್ದ.

ಪೊಲೀಸರ ವಿಚಾರಣೆಯಲ್ಲಿ ಪ್ರಿಯಾ ಮೆಹ್ರಾರನ್ನು ಕೊಂದಿದ್ದು ಆಕೆಯ ಪತಿ ಪಂಕಜ್ ಎಂಬುದು ಬಹಿರಂಗವಾಗಿದೆ. ಪಂಕಜ್ ಮೆಹ್ರಾ ಪೊಲೀಸರ ಎದುರು ತನ್ನ ಪತ್ನಿಯನ್ನ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಪಂಕಜ್‌ಗೆ ಪ್ರಿಯಾ ಎರಡನೇ ಪತ್ನಿ. ಮೊದಲ ಪತ್ನಿಯಿಂದ ದೂರವಾದ ನಂತರ ಪಂಕಜ್ ಪ್ರಿಯಾಳನ್ನು ವಿವಾಹವಾಗಿದ್ದ. ಆದರೆ ಇತ್ತೀಚೆಗೆ ಪಂಕಜ್ ಮತ್ತೆ ಮೊದಲ ಪತ್ನಿಯೊಂದಿಗೆ ಸಾಂಗತ್ಯ ಬೆಳೆಸಿದ್ದ. ಮೊದಲ ಪತ್ನಿಯೊಂದಿಗೆ ಸಂಸಾರ ಆರಂಭಿಸುವ ನಿಟ್ಟಿನಲ್ಲಿ ಪಂಕಜ್ ಎರಡನೇ ಹೆಂಡ್ತಿ ಪ್ರಿಯಾಳನ್ನು ಕೊಂದಿದ್ದಾನೆ ಎನ್ನಲಾಗಿದೆ. 

ಪಂಕಜ್ ಕಾರಿನಲ್ಲಿ ಪ್ರಿಯಾಳಿಗೆ ಪಿಸ್ತೂಲ್‌ ನಿಂದ ಶೂಟ್ ಮಾಡಿದ ನಂತರ ಕುಟುಂಬದವರು ಆಸ್ಪತ್ರೆಗೆ ಕರೆದೊಯ್ಯುವವರೆಗೆ ಪ್ರಿಯಾ ಜೀವಂತವಾಗಿದ್ದರು. ಆಕೆ ಕಣ್ಣುಗಳನ್ನು ಮಿಟುಕಿಸುತ್ತಿದ್ದರು. ಆದರೆ ಅರ್ಧಗಂಟೆಯ ನಂತರ ಪ್ರಿಯಾ ಮೃತಪಟ್ಟಿದ್ದಾರೆ ಎಂದು ಪಂಕಜ್ ತಂಗಿ ಸಬೀನಾ ತಿಳಿಸಿದ್ದಾರೆ.

ಪ್ರಿಯಾಳನ್ನು ಕೊಂದ ಪಂಕಜ್ ಮೊದಲು ವಿಚಾರಣೆ ನಡೆಸಿದಾಗ ದೊಡ್ಡ ನಾಟಕವನ್ನೇ ಆಡಿದ್ದ. ನಾನು ಬಡ್ಡಿದಾರರ ಬಳಿ ಸುಮಾರು 5 ಲಕ್ಷ ರೂ. ಸಾಲವನ್ನು ಪಡೆದಿದ್ದೆ. ಆದರೆ ಅದನ್ನು ಹಿಂದಿರುಗಿಸಲು ತಡವಾಗಿದ್ದರಿಂದ ಸಾಲ ಕೊಟ್ಟವರು ಚಕ್ರ ಬಡ್ಡಿ ಸೇರಿಸಿ 40 ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಇಷ್ಟೊಂದು ಮೊತ್ತದ ಹಣ ನೀಡಲು ನಾನು ನಿರಾಕರಿಸಿದ್ದೆ. ಈ ಕಾರಣಕ್ಕೆ ನನ್ನ ಮೇಲೆ ದಾಳಿ ನಡೆಸಿರಬಹುದು. ಆದರೆ ಈ ದಾಳಿಯಲ್ಲಿ ಪತ್ನಿ ಸಾವನ್ನಪ್ಪಿದಳು ಎಂದು ಹೇಳಿದ್ದ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ: ಆರೋಪಿ ಅರೆಸ್ಟ್