ತನ್ನ ಪತ್ನಿ ಮೇಲೆ ಕಾಮದ ಕಣ್ಣು ಹಾಕಿದ್ದ ತಮ್ಮನೊಬ್ಬನನ್ನು ಅಣ್ಣನೇ ಕೊಲೆ ಮಾಡಿದ್ದಾನೆ.
ಕೊಲೆ ಪ್ರಕರಣದಲ್ಲಿ ಗಂಡನಿಗೆ ಪತ್ನಿಯೂ ಸಾಥ್ ನೀಡಿದ್ದಾಳೆ ಎನ್ನಲಾಗಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಘಟನೆ ನಡೆದಿದ್ದು, 21 ವರ್ಷದ ವೇದ ಪ್ರಕಾಶ ಕೊಲೆಯಾಗಿದ್ದಾನೆ. ಅಣ್ಣ ಓಂ ಪ್ರಕಾಶ್ ಹಾಗೂ ಪತ್ನಿ ದೇವಿ ಆರೋಪಿಗಳಾಗಿದ್ದಾರೆ.
ದೇವಿ ಮೇಲೆ ಕೊಲೆಯಾದ ವೇದ ಪ್ರಕಾಶ್ ಕಣ್ಣು ಹಾಕಿದ್ದನು. ಎಷ್ಟೇ ಬುದ್ದಿ ಹೇಳಿದರೂ ಕೇಳದೇ ಕೆಟ್ಟದಾಗಿ ವರ್ತಿಸುತ್ತಲೇ ಇದ್ದನು ಎನ್ನಲಾಗಿದೆ.
ಇದರಿಂದ ರೋಸಿಹೋದ ಅಣ್ಣ ಓಂ ಪ್ರಕಾಶ್ ಹಾಗೂ ಆತನ ಪತ್ನಿ ದೇವಿ ಸೇರಿಕೊಂಡು ವೇದ ಪ್ರಕಾಶ್ ನನ್ನು ಕೊಲೆ ಮಾಡಿದ್ದಾರೆ. ಪೊಲೀಸರು ಆರೋಪಿ ದಂಪತಿಯನ್ನು ಬಂಧನ ಮಾಡಿದ್ದಾರೆ.