Publish Date: Sat, 12 Dec 2020 (13:20 IST)
Updated Date: Sat, 12 Dec 2020 (13:21 IST)
ಬೈಕ್ ಅಪಘಾತ ಕೇಸ್ ನಿಂದಾಗಿ ಯುವತಿಯೊಬ್ಬಳ ಮೇಲೆ ನಡೆದಿದ್ದ ಮಾನಭಂಗ ಕೇಸ್ ಬಯಲಿಗೆ ಬಂದಿದೆ.
ಯುವತಿಯೊಬ್ಬಳಿಗೆ ಡ್ರಾಪ್ ಕೊಡುವುದಾಗಿ ಹೇಳಿದ ಪರಿಚಯದ ಯುವಕ ಮಲ್ಲಿಕಜಾನ್ ಎಂಬಾತ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮಾನಭಂಗ ಎಸಗಿದ್ದಾನೆ.
ವಾಪಸ್ ಬರುವಾಗ ಬೈಕ್ ಅಪಘಾತಕ್ಕೆ ಈಡಾಗಿದೆ. ಆಸ್ಪತ್ರೆ ಸೇರಿರುವ ಯುವತಿ ತನ್ನ ಮೇಲೆ ನಡೆದಿರುವ ಘಟನೆ ಕುರಿತು ಕೇಸ್ ದಾಖಲು ಮಾಡಿದ್ದಾಳೆ.
ಹುಬ್ಬಳ್ಳಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.