Publish Date: Thu, 01 Apr 2021 (12:47 IST)
Updated Date: Thu, 01 Apr 2021 (12:48 IST)
ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿ ಲೇಡಿ ಸಹೋದರ ಡಿಕೆ ಶಿವಕುಮಾರ್ ವಿರುದ್ಧ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಡಿಕೆಶಿ ನಮ್ಮ ಅಕ್ಕನನ್ನು ಹೆದರಿಸಿ ಇಟ್ಟಿದ್ದಾರೆ. ಇಂದಲ್ಲ ನಾಳೆ ಡಿಕೆಶಿ ಹೆಸರು ಹೊರಗೆ ಬರುತ್ತೆ. ನಾನು ದಾಖಲೆ ಸಮೇತ ಹೇಳುತ್ತಿದ್ದೇನೆ. ತನಿಖೆಯಾಗಲಿ ಎಲ್ಲವೂ ಹೊರ ಬರುತ್ತೆ. ಯಾವುದೇ ಕಾರಣಕ್ಕೂ ಸತ್ಯ ಮುಚ್ಚಿಡಲು ಆಗಲ್ಲ. ಎಂದು ಹೇಳಿದ್ದಾರೆ.
ನಾವು ಎಲ್ಲ ಸಾಕ್ಷಿಗಳನ್ನು ಎಸ್ ಐಟಿಗೆ ನೀಡಿದ್ದೇವೆ. ನಮ್ಮ ಬಳಿ ಇನ್ನೂ 9 ಸಾಕ್ಷಿಗಳು ಇವೆ. ಸಮಯ ಬಂದಾಗ ಉಳಿದ ಸಾಕ್ಷಿ ಬಿಡುತ್ತೇನೆ. ಉಳಿದ ಸಾಕ್ಷಿಗಳು ಡಿಕೆಶಿಗೆ ಮುಳುವಾಗುತ್ತೆ ಎಂದು ಡಿಕೆಶಿ ವಿರುದ್ಧ ಸಿಡಿ ಲೇಡಿ ಸಹೋದರನ ಸ್ಫೋಟಕ ಹೇಳಿಕೆ ನೀಡಿದ್ದಾರೆ.