Publish Date: Thu, 01 Apr 2021 (12:04 IST)
Updated Date: Thu, 01 Apr 2021 (12:07 IST)
ಬೆಂಗಳೂರು : ಸಿಎಂ ವಿರುದ್ಧ ಈಶ್ವರಪ್ಪ ದೂರು ವಿಚಾರ ಈಶ್ವರಪ್ಪ ಪತ್ರಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಚಿವ ಈಶ್ವರಪ್ಪ ಅವರು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಸಿಎಂ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಬಿಜೆಪಿ ಹೈಕಮಾಂಡ್ ಮತ್ತು ರಾಜ್ಯಪಾಲರಿಗೆ ದೂರು ನೀಡಿದ್ದು, ಈ ಬಗ್ಗೆ ಪಕ್ಷದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ಈ ಬಗ್ಗೆ ಮಾತನಾಡಿದ ಅರುಣ್ ಸಿಂಗ್ ಅವರು, ಈಶ್ವರಪ್ಪ ಸಂಪುಟದಲ್ಲಿ ಹಿರಿಯ ಸಚಿವರು. ಈಶ್ವರಪ್ಪ ಹೀಗೆ ಬಹಿರಂಗ ಪತ್ರ ಬರೆಯಬಾರದಿತ್ತು. ಏನೇ ಮನಸ್ತಾಪವಿದ್ದರೂ ಸಿಎಂ ಜೊತೆ ಚರ್ಚಿಸಬೇಕು. ಪಕ್ಷದ ವೇದಿಕೆಯಲ್ಲಿ ಪ್ರಸ್ತಾಪ ಮಾಡಬೇಕು. ಮುಂಚೆಯೇ ರಾಜ್ಯಪಾಲರಿಗೆ ಪತ್ರ ಬರೆಯಬಾರದಿತ್ತು. ಚುನಾವಣೆ ಬಳಿಕ ಈಶ್ವರಪ್ಪ ಪತ್ರದ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.