Publish Date: Thu, 01 Apr 2021 (06:32 IST)
Updated Date: Thu, 01 Apr 2021 (06:34 IST)
ಬೆಂಗಳೂರು : ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಯಾವಾಗಲೂ ಹಣದ ಸಮಸ್ಯೆಗೆ ಒಳಗಾಗುತ್ತಾನೆ. ಮತ್ತೆ ಈ ಸಮಸ್ಯೆಯಿಂದ ಹೊರಬರಲು ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಪರಿಹಾರಗಳನ್ನು ಮಾಡಿದರೆ ಹಣದ ಸಮಸ್ಯೆಯನ್ನು ನಿವಾರಿಸಬಹುದು.
ಲಕ್ಷ್ಮಿದೇವಿಗೆ ಕಮಲ ಎಂದರೆ ತುಂಬಾ ಇಷ್ಟ. ಹಾಗಾಗಿ ಕಮಲದ ಹಾರವನ್ನು ಲಕ್ಷ್ಮಿಗೆ ಅರ್ಪಿಸಿದರೆ ಹಣದ ಲಾಭವನ್ನು ಪಡೆಯಬಹುದು. ಹಾಗೇ ಗುರುವಾರದಂದು ಹಿಟ್ಟು ಮತ್ತು ಬೆಲ್ಲವನ್ನು ಸೇರಿಸಿ ರೋಟಿ ತಯಾರಿಸಿ ಸಂಜೆಯ ವೇಳೆಗೆ ಹಸುವಿಗೆ ತಿನ್ನಿಸಿ. ಮೂರು ಗುರುವಾರ ಈ ಕೆಲಸ ಮಾಡಿದರೆ ಹಣದ ಕೊರತೆ ನಿವಾರಣೆಯಾಗುತ್ತದೆ.
ಹಾಗೇ ಶನಿವಾರದಂದು ಕಪ್ಪು ನಾಯಿಗೆ ಸಾಸಿವೆ ಎಣ್ಣೆ ಬಳಸಿ ಅಡುಗೆ ಮಾಡಿ ನಾಯಿಗೆ ತಿನ್ನಲು ನೀಡುವುದರಿಂದ ಶನಿದೇವ ಸಂತೋಷಗೊಳ್ಳುತ್ತಾನೆ. ಇದರಿಂದ ಕೂಡ ಹಣದ ಸಮಸ್ಯೆ ದೂರವಾಗುತ್ತದೆ.