Select Your Language

Notifications

webdunia
webdunia
webdunia
webdunia

ಮಾಜಿ ಸಂಸದ ಅಳಿಯನ ಪುಂಡಾಟಕ್ಕೆ ಬಿತ್ತು ಭಾರಿ ದಂಡ...!!!

ಮಾಜಿ ಸಂಸದ ಅಳಿಯನ ಪುಂಡಾಟಕ್ಕೆ ಬಿತ್ತು ಭಾರಿ ದಂಡ...!!!
ಬೆಂಗಳೂರು , ಬುಧವಾರ, 17 ಆಗಸ್ಟ್ 2022 (19:21 IST)
ಸಿಲಿಕಾನ್​ ಸಿಟಿಯಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರ ಅಳಿಯ ಪುಂಡಾಟ ಮರೆದಿರುವ ಪ್ರಸಂಗ ಬೆಳಕಿಗೆ ಬಂದಿದೆ. ಜೀವ ಉಳಿಸಲು ಬಳಸುವ ಆಂಬ್ಯುಲೆನ್ಸ್​ ಸೈರೆನ್​ ಅನ್ನು ಕಾರಿಗೆ ಅಳವಡಿಸಿಕೊಂಡು ನಗರದಲ್ಲಿ ಅಡ್ಡಾಡುವ ಮೂಲಕ ರಾಜಕಾರಣಿಯ ಅಳಿಯ ಹುಂಬತನ ಮೆರದಿದ್ದಾನೆ.
 
ಪ್ರಭಾವಿ ರಾಜಕಾರಣಿ ಬೇರೆ ಯಾರು ಅಲ್ಲ, ಮಾಜಿ ಸಂಸದ ಎಲ್​.ಆರ್​. ಶಿವರಾಮೇಗೌಡ. ಇವರ ಅಳಿಯ ರಾಜೀವ್​ ರಾಥೋಡ್​ ಎಂಬಾತ ಕಾರಿಗೆ ಸೈರೆನ್​ ಅಳವಡಿಸಿಕೊಂಡು ವಿಜಯನಗರದಲ್ಲಿ ನ್ಯೂಸೆನ್ಸ್​ ಸೃಷ್ಟಿಸಿಸ್ದಾರೆ.
 
ಸ್ಯಾಂಡಲ್​ವುಡ್​ ನಟನೂ ಆಗಿರುವ ರಾಥೋಡ್​, ತನ್ನ KA51 MG 9299 ನಂಬರಿನ ಆಡಿ ಕ್ಯೂ 7 ಕಾರಿನಲ್ಲಿ ಆಯಂಬುಲೆನ್ಸ್ ಸೈರನ್ ಹಾಕಿಕೊಂಡು, ಇಷ್ಟಬಂದ ಹಾಗೇ ಓಡಾಡಿ, ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿದ್ದಲ್ಲದೆ, ಸಾರ್ವಜನಿಕರಿಗೆ ತೊಂದರೆ ನೀಡಿದ್ದಾರೆ.
 
ಸಂಚಾರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ರಾಜೀವ್​ ರಾಥೋಡ್​ ಅವರಿಂದ ವಿಜಯನಗರ ಸಂಚಾರಿ ಪೊಲೀಸರು ದಂಡ ಕಟ್ಟಿಸಿಕೊಂಡು, ಮತ್ತೆ ಈ ರೀತಿ ಮಾಡದಂತೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಮನೆ ಕಟ್ಟಲು ಮರಳು ಸಿಗುವುದಿಲ್ಲ...!!!