Select Your Language

Notifications

webdunia
webdunia
webdunia
webdunia

ಪೊಲೀಸ್ ವಾಹನದಲ್ಲಿ ಬಾಂಬ್ ಪತ್ತೆ!

ಪೊಲೀಸ್ ವಾಹನದಲ್ಲಿ ಬಾಂಬ್ ಪತ್ತೆ!
ಚಂಡೀಗಢ , ಬುಧವಾರ, 17 ಆಗಸ್ಟ್ 2022 (11:05 IST)
ಚಂಡೀಗಢ : ಪೊಲೀಸ್ ಅಧಿಕಾರಿಯೊಬ್ಬರ ಕಾರಿನ ಕೆಳಗೆ ಬಾಂಬ್ ಮಾದರಿಯ ವಸ್ತುವೊಂದು ಪತ್ತೆ ಆದ ಘಟನೆ ಪಂಜಾಬ್ನ ಅಮೃತಸರ ಜಿಲ್ಲೆಯಲ್ಲಿ ನಡೆದಿದೆ.

ಅಮೃತಸರದ ರಂಜಿತ್ ಅವೆನ್ಯೂ ಪ್ರದೇಶದಲ್ಲಿರುವ ಸಬ್ ಇನ್ಸ್ಪೆಕ್ಟರ್ ದಿಲ್ಬಾಗ್ ಸಿಂಗ್ ಅವರ ನಿವಾಸದ ಬಳಿ ಬಾಂಬ್ ಮಾದರಿಯ ವಸ್ತು ಪತ್ತೆ ಆಗಿದೆ.

ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡು ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿದ ಪೊಲೀಸರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕ್ನಲ್ಲಿ ಬಂದು ಪೊಲೀಸ್ ಕಾರಿನ ಕೆಳಗೆ ಈ ಅನುಮಾನಸ್ಪದ ವಸ್ತುವನ್ನು ಇಟ್ಟು ಹೋಗಿರುವುದು ಕಂಡು ಬಂದಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ ಈ ವಸ್ತು ಬಾಂಬ್ ಎಂದು ತಿಳಿಸಿದ್ದಾರೆ. ಇನ್ಸ್ಪೆಕ್ಟರ್ ಜನರಲ್ ಸುಖ್ ಚಾನ್ ಸಿಂಗ್ ಗೋಲ್ ಅವರು, ಈ ವಸ್ತುವು ಡಿಟೋನೇಟರ್ ಆಗಿರಬಹುದು ಎಂದು ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ