Publish Date: Fri, 13 Nov 2020 (08:20 IST)
Updated Date: Fri, 13 Nov 2020 (08:23 IST)
ಬೆಂಗಳೂರು : ವಿವಾಹಿತ ಮಹಿಳೆಯೊಬ್ಬಳಿಗೆ ಆಕೆಯ ಮಾಜಿ ಗೆಳೆಯ ಹಾಗೂ ಆತನ ಗೆಳತಿ ಸೇರಿ ಖಾಸಗಿ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿ ಆಕೆಯಿಂದ 1 ಕೋಟಿ ಗಿಂತ ಅಧಿಕ ಹಣ ಸುಲಿಗೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಹಿಳೆಗೆ 11 ವರ್ಷಗಳ ಹಿಂದೆ ಮದುವೆಯಾಗಿದ್ದು, 8 ವರ್ಷದ ಮಗುವಿದೆ. ಆದರೆ ಆಕೆಗೆ ಕಾಲೇಜು ದಿನಗಳಲ್ಲಿ ಗೆಳೆಯನೊಬ್ಬನೊಂದಿಗೆ ಸಂಬಂಧ ಹೊಂದಿದ್ದಳು. ಇತ್ತೀಚೆಗೆ ಮತ್ತೆ ಪರಿಚಯನಾದ ಆತ ಮತ್ತು ಆತನ ಸ್ನೇಹಿತೆ ಇಬ್ಬರು ಸೇರಿ ಪ್ಲ್ಯಾನ್ ಮಾಡಿ ಆಕೆಯ ಖಾಸಗಿ ಫೋಟಿಗಳನ್ನು ಪಡೆದುಕೊಂಡು ಹಣಕ್ಕಾಗಿ ಬೆದರಿಕೆ ಹಾಕಿದ್ದಾರೆ. ಅದರಂತೆ ಆಕೆ 1.3 ಕೋಟಿ ಹಣ ಅವರಿಗೆ ನೀಡಿದ್ದಾಳೆ.
ಕೊನೆಗೆ ಈ ಬಗ್ಗೆ ಪತಿ ವಿಚಾರಿಸಿದಾಗ ಆಕೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ತಕ್ಷಣ ಪತಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.