Select Your Language

Notifications

webdunia
webdunia
webdunia
webdunia

ಅನ್ನದ ಅಗಳಿನಿಂದ ದೇವರ ಮೂರ್ತಿ ಪ್ರತಿಷ್ಠಾಪನೆ: ಕಾರಣ ಗೊತ್ತಾ?

ಅನ್ನದ ಅಗಳಿನಿಂದ ದೇವರ ಮೂರ್ತಿ ಪ್ರತಿಷ್ಠಾಪನೆ: ಕಾರಣ ಗೊತ್ತಾ?
ಗದಗ , ಗುರುವಾರ, 4 ಅಕ್ಟೋಬರ್ 2018 (14:59 IST)
ಧಾರ್ಮಿಕ ಕಾರ್ಯಕ್ರಮ ಪುರಾಣ, ಪ್ರವಚನಗಳಂಥಹ ಸಮಾರಂಭಗಳಲ್ಲಿ ಪ್ರಸಾದ ಇದ್ದೇ ಇರುತ್ತದೆ. ಆದರೆ ಅಂದು ಮಾಡಿದ ಪ್ರಸಾದ ಅವತ್ತೇ ಭಕ್ತಾಧಿಗಳಿಗೆ ವಿನಿಯೋಗಿಸುತ್ತಾರೆ. ಆದರೆ ಈ ಗ್ರಾಮದಲ್ಲಿ ಮಾತ್ರ ವಿಭಿನ್ನ. ಮಾಡಿದ ಪ್ರಸಾದವನ್ನು ಎರೆಡು ದಿನಗಳ ಹಾಗೆ ಇಟ್ಟು ಮೂರನೇ ದಿನಕ್ಕೆ ಅದನ್ನು ಹಂಚುತ್ತಾರೆ. ಈ ವಿಶಿಷ್ಠ ಪ್ರಸಾದ ವಿನಿಯೋಗ ಗದಗ ಜಿಲ್ಲೆ ಹಾಲಕೇರಿ ಸಮೀಪದ ಜಕ್ಕಲಿ ಗ್ರಾಮದಲ್ಲಿ ಕಂಡುಬರುತ್ತದೆ.

ಜಕ್ಕಲಿ ಗ್ರಾಮದ ಅನ್ನದಾನೀಶ್ವರ ಮಠದಲ್ಲಿ ಎಡೆಯೂರು ಸಿದ್ಧಲಿಂಗೇಶ್ವರ ಪುರಾಣ ಏರ್ಪಡಿಸಲಾಗಿದೆ. ಇದರ ನಿಮಿತ್ಯ ಅನ್ನದ ಅಗಳಿನಿಂದ ಎಡೆಯೂರು ಸಿದ್ಧಲಿಂಗೇಶ್ವರ ಮೂರ್ತಿ ಪ್ರತಿಷ್ಠಾಪನೆ ಮಾಡಿ ಭಕ್ತರು ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ.
ಪುರಾಣದ 15ನೇ ದಿನದಂದು ಗ್ರಾಮದ ಭಕ್ತರು ವಿಶಿಷ್ಠ ಪೂಜೆ ನೆರವೇರಿಸಿದರು. ಪುರಾಣದಲ್ಲಿ ಬರುವ ಸಂದರ್ಭದಂತೆ  ಧರ್ಮ ಸಭೆಯ ನಂತರ ಪ್ರಸಾದ ಸೇವನೆ ಕಾರ್ಯಕ್ರಮದಲ್ಲಿ ಎರಡು ಕೋಮಿನ ನಡುವೆ ಜಗಳವಾಗುತ್ತದೆ. ಇದರಿಂದ ಅನ್ನ ಸಂತರ್ಪಣೆ ಆಗದೆ ಪ್ರಸಾದ ಹಾಗೆ ಉಳಿಯುತ್ತದೆ. ಆಗ ಎಡೆಯೂರು ಸಿದ್ದಲಿಂಗ ಸ್ವಾಮೀಜಿಯವರು ಸತತ 12 ವರ್ಷ ಕಾಲ ತಪಸ್ಸು ಮಾಡಿದ ನಂತರ ಅಂದಿನ ಪ್ರಸಾದವನ್ನು ಜನರಿಗೆ ಉಣಬಡಿಸುತ್ತಾರೆ ಎನ್ನುವ ಪ್ರತೀತಿ ಇದೆ. ಅದರ ಅಂಗವಾಗಿ ಗ್ರಾಮದಲ್ಲಿ ನಡೆಯುತ್ತಿರುವ ಪ್ರವಚನದಲ್ಲಿಯೂ ಸಹ  ಬೆಳಿಗ್ಗೆ ಬೇಯಿಸಿದ ಅಕ್ಕಿಯ ಅನ್ನದ ಅಗಳಿನಿಂದ (ಬಾನದಿಂದ) ಎಡೆಯೂರ ಸಿದ್ದಲಿಂಗೇಶ್ವರರ ಮೂರ್ತಿಯನ್ನು ಸ್ಥಳೀಯ ಶಿಲ್ಪಿ ಸೋಮಪ್ಪ ಪ್ರತಿಷ್ಠಾಪಿಸಿ ಎರಡು ದಿನಗಳ ಪೂಜೆಯ ನಂತರ ಸಂಜೆ ವೇಳೆ ಮೂರ್ತಿಯನ್ನು ಗ್ರಾಮದ ಜನರಿಗೆ ಪ್ರಸಾದದ ರೂಪದಲ್ಲಿ ಉಣಬಡಿಸಲಾಗುತ್ತದೆ.

ಎರೆಡು ದಿನಗಳ ಕಾಲ ಈ ಅನ್ನದ ಪ್ರಸಾದ ಏನೂ ಆಗುವದಿಲ್ಲ. ಕೆಡುವದಿಲ್ಲ ಅನ್ನೋದೇ ಇಲ್ಲಿನ ಭಕ್ತರ ನಂಬಿಕೆ.  ಹೀಗಾಗಿ ಈ ಪ್ರಸಾದ ಸವಿಯಲು ಸುತ್ತಮುತ್ತಲಿನ ಗ್ರಾಮಗಳ ಜನತೆ ತಂಡೋಪತಂಡವಾಗಿ ಬಂದು ಮೂರ್ತಿ ಮಾಡಿದ ಎರೆಡು ದಿನದ ಪ್ರಸಾದ ಸ್ವೀಕರಿಸುತ್ತಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕ್ಕೆ ಪ್ರಧಾನಿ ಮೋದಿಯಂಥ ನಾಯಕತ್ವ ಅಗತ್ಯವೆಂದು ಎರಿಕ್‌ ಸೊಲ್ಹಿಮ್‌ ಹೇಳಿದ್ದೇಕೆ..?