Webdunia - Bharat's app for daily news and videos

Install App

ಪಾಕಿಸ್ತಾನ್ ಜಿಂದಾಬಾದ್ ಅನ್ನೋ ದೇಶದ್ರೋಹಿಗಳನ್ನ ಸುಮ್ಮನೆ ಬಿಡಲ್ಲ: ಈಶ್ವರಪ್ಪ

Webdunia
ಗುರುವಾರ, 2 ನವೆಂಬರ್ 2017 (15:49 IST)
ಬೆಂಗಳೂರು: ನರೇಂದ್ರ ಮೋದಿ ಸೂರ್ಯ ಇದ್ದಂತೆ. ಕಾಂಗ್ರೆಸ್ ಕಚೇರಿಯಲ್ಲಿ ಕುಳಿತು ಉಗಿದ್ರೆ ಸೂರ್ಯನಿಗೆ ಉಗಿದಂತೆ. ಅದು ನಿಮ್ಮ ಮುಖಕ್ಕೆ ವಾಪಸ್ ಬೀಳುತ್ತೆ ಎಂದು ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ಪರಿವರ್ತನಾ ಯಾತ್ರೆ ಉದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನದ ಉಗ್ರವಾದಿಗಳು ಭಾರತದ ಸೈನಿಕರ ತಲೆ ಕತ್ತರಿಸಿದರೆ, ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ತಾನಕ್ಕೆ ನುಗ್ಗಿ 2 ಸಾವಿರ ಸೈನಿಕರನ್ನು ನಿರ್ನಾನ ಮಾಡಿದ್ರು ಎಂದರು.

ಮೋದಿಗೆ ನನ್ನ ಕಂಡರೆ ಭಯ ಎಂದು ಸಿದ್ದರಾಮಯ್ಯ ಹೇಳ್ತಾರೆ. ಸಿದ್ದರಾಮಯ್ಯ ಎಲ್ಲಿ? ನರೇಂದ್ರ ಮೋದಿ ಎಲ್ಲಿ? ಸಿದ್ದರಾಮಯ್ಯ ಮೈ ಮೇಲೆ ಜ್ಞಾನ ಇಟ್ಕೊಂಡು ಮಾತನಾಡಲಿ. ಪ್ರಧಾನಿ‌ ಮೋದಿ‌ ಇಡೀ ಪ್ರಪಂಚಕ್ಕೆ ಸೂರ್ಯ ಇದ್ದಂಗೆ. ಕಾಂಗ್ರೆಸ್ ಕಚೇರಿಯಲ್ಲಿ ಕುಳಿತು ಸೂರ್ಯಂಗೆ ಉಗುಳೋಕೆ ಹೋಗ್ತೀರಾ? ಎಂದು ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.

ನಾವ್ಯಾರೂ ನಾಮರ್ದರಲ್ಲ. ಇಲ್ಲಿದ್ದುಕ್ಕೊಂಡು ಪಾಕಿಸ್ತಾನ್ ಜಿಂದಾಬಾದ್ ಅನ್ನೋ ದೇಶದ್ರೋಹಿಗಳನ್ನ ಸುಮ್ಮನೆ ಬಿಡಲ್ಲ. ಹಿಂದೂ ಯುವಕರ ಕಗ್ಗೊಲೆ ಮಾಡುವ ದೇಶದ್ರೋಹಿಗಳನ್ನ ಸುಮ್ಮನೆ ಬಿಡಲ್ಲ. ಮೋದಿಗೆ ನನ್ನ ಕಂಡರೆ ಭಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕೂಡಲೇ ಸಿದ್ದರಾಮಯ್ಯ ರಾಜ್ಯದ ಜನತೆ ಕ್ಷಮೆ ಕೇಳಲಿ. ಮೋದಿ ಜತೆ ಇಡೀ ಪ್ರಪಂಚವೇ ಇದೆ. ಆದರೆ ಮೋದಿ ವಿರುದ್ದ ಇರೋರು  ಇಬ್ಬರೆ. ಅದು ಸಿದ್ದರಾಮಯ್ಯ ಮತ್ತು ಪಾಕಿಸ್ತಾನ ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಎಲ್ಲಾ ಶಾಸಕರಿಗೂ ಒಂದೇ ಬಾರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ಸಾಧ್ಯವಿಲ್ಲ

ಈ ವಿಷಯಕ್ಕೆ ಪ್ರಧಾನಿ, ಗೃಹ ಸಚಿವರು ಸದನದಲ್ಲಿ ಉತ್ತರಿಸಬೇಕು: ಮಲ್ಲಿಕಾರ್ಜುನ ಖರ್ಗೆ

ಕಾರು ಚಲಾಯಿಸಿ ವ್ಯಕ್ತಿಯ ಸಾವಿಗೆ ಕಾರಣವಾದ ಅಪ್ರಾಪ್ತ, Deadly Video

ಮಿತವಾದಿ ಹಿಂದೂ ಆಗಿದ್ದೆ, ಇದೀಗ ಜಾಗೃತ ಹಿಂದೂ ಆಗಿ ಬದಲಾಗಿದ್ದೇನೆ: ಕಂಗನಾ ರನೌತ್

ಪೊಲೀಸ್ ಪರೀಕ್ಷೆ ಬಳಿಕ ಮೆಜೆಸ್ಟಿಕ್‌ನಲ್ಲಿ ರೈಲು ಹತ್ತುವಾಗ ಕಂಡ ಆಘಾತಕಾರಿ ವಿಡಿಯೋ ಇಲ್ಲಿದೆ

ಮುಂದಿನ ಸುದ್ದಿ
Show comments