Select Your Language

Notifications

webdunia
webdunia
webdunia
webdunia

ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ ರಾಷ್ಟ್ರದಲ್ಲಿಯೇ ಮೊದಲು: ಯಡಿಯೂರಪ್ಪ

ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ ರಾಷ್ಟ್ರದಲ್ಲಿಯೇ ಮೊದಲು: ಯಡಿಯೂರಪ್ಪ
ಬೆಂಗಳೂರು , ಗುರುವಾರ, 2 ನವೆಂಬರ್ 2017 (15:03 IST)
ಬೆಂಗಳೂರು: ಇಡೀ ದೇಶದಲ್ಲೇ  ಅತ್ಯಂತ ಭ್ರಷ್ಟ ಸರ್ಕಾರ ಸಿದ್ದರಾಮಯ್ಯ ಸರ್ಕಾರ ಎಂದು ಯಡಿಯೂರಪ್ಪ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪರಿವರ್ತನಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯಾದ್ಯಂತ ಪಕ್ಷ ಬಲ ಪಡಿಸಿ ಕರ್ನಾಟಕವನ್ನು ಕಾಂಗ್ರೆಸ್ ‌ಮುಕ್ತ ಮಾಡಿ ಎಂಬ ಮೋದಿಯವರ ಕರೆಯಂತೆ ಅಮಿತ್ ಷಾ ಇಲ್ಲಿಗೆ ಬಂದಿದ್ದಾರೆ. ಬಿಜೆಪಿಯ ಸಾವಿರಾರು ಮೋಟರ್ ಬೈಕ್ ತಡೆದು ಸಿದ್ದರಾಮಯ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡ್ತಿದೆ. ರಾಜ್ಯದ ಎಲ್ಲಾ ವಿಧಾನಸಭೆ ಕ್ಷೇತ್ರಗಳಲ್ಲಿ ಯಾತ್ರೆ ಮಾಡಿ ಬಿಜೆಪಿಯ ವಿರಾಟ ಶಕ್ತಿ ತೋರಿಸುತ್ತೇವೆ ಎಂದರು.

ಕರ್ನಾಟಕ ರಾಜ್ಯವನ್ನು ದೇಶದಲ್ಲೇ ಮಾದರಿ ರಾಜ್ಯ ಮಾಡಲು ಸಂಕಲ್ಪ‌ ಮಾಡಿದ್ದೇವೆ. ಸರ್ವರಿಗೂ ಸಮಪಾಲು, ಸಾಮಾಜಿಕ ನ್ಯಾಯ ತತ್ವಗಳಡಿ‌ ಸರ್ಕಾರ ರಚಿಸುವ ಗುರಿಯಿದೆ. ರಾಜ್ಯದಲ್ಲಿ ಯುದ್ಧ ಆರಂಭವಾಗಿದೆ. ಸೈನಿಕರ ರೀತಿ ಬಿಜೆಪಿ ಗೆಲ್ಲಿಸಲು ಪಣ ತೊಡಿ. ಹೀಗೆ ಮಾಡಿದರೆ ರಾಜ್ಯದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎನ್ನುವ ಮೂಲಕ ಕಾರ್ಯಕರ್ತರಿಗೆ ಹೊಸ ಹುರುಪು ತುಂಬಿದರು.

ಬೇಜವಾಬ್ದಾರಿ, ರೈತ, ಮಹಿಳಾ ವಿರೋಧಿ ಭ್ರಷ್ಟ  ಸಿದ್ದರಾಮಯ್ಯ ಸರ್ಕಾರ ಕಿತ್ತೊಗೆಯುವುದೇ ನಮ್ಮ ಗುರಿ. ಮೊನ್ನೆ ಪ್ರಧಾನಿ‌ ಮೋದಿ  ರಾಜ್ಯಕ್ಕೆ ಬಂದು ಮಾತಾಡಿ ಹೋಗಿದ್ದಾರೆ. ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ರಾಜ್ಯದಲ್ಲಿ ಮೊದಲ ಬಾರಿ ಕೃಷಿ ಬಜೆಟ್, ಮಕ್ಕಳಿಗೆ ಬೈಸಿಕಲ್, ಸುವರ್ಣ ಗ್ರಾಮ ಯೋಜನೆ ಜಾರಿಗೆ ತಂದದ್ದು ನಿಮ್ಮ ಯಡಿಯೂರಪ್ಪ. ರಾಜ್ಯದಲ್ಲಿ ಮೊದಲ ಬಾರಿ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದು ನಿಮ್ಮ ಯಡಿಯೂರಪ್ಪ ಎಂಬ ಹೆಮ್ಮೆ ನನಗಿದೆ ಎಂದರು.

ನಮಗೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂಬ ಭೇದ ಭಾವ ಇಲ್ಲ. ಪ್ರಧಾನಿ‌ ಮೋದಿಯವರ  ಸಬ್ ಕ ಸಾಥ್ ಸಬ್ ಕಾ ವಿಕಾಸ್ ಎಂಬ ತತ್ವದಡಿ ನಡೆದುಕೊಂಡಿದ್ದೇವೆ. ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ ರಾಷ್ಟ್ರದಲ್ಲಿಯೇ ಮೊದಲ ಸ್ಥಾನ ಪಡೆದಿದೆ. ಅತ್ಯಂತ ಭ್ರಷ್ಟ ಸಿಎಂ ಸಿದ್ದರಾಮಯ್ಯ ಅಂತ ಅಮಿತ್ ಷಾ ಹೇಳಿದ್ರು. ಅದನ್ನು ಸಿದ್ದರಾಮಯ್ಯ ಸಾಬೀತು ಪಡಿಸಿದ್ದಾರೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಭ್ರಷ್ಟಾಚಾರದ ಸರ್ಕಾರ ಕೊಡ್ತೇವೆ ಎಂದು ಮೋದಿ ಹೇಳಿದ್ದಾರೆ: ಡಿವಿಎಸ್ ಎಡವಟ್ಟು