Publish Date: Sun, 17 Sep 2023 (15:40 IST)
Updated Date: Sun, 17 Sep 2023 (15:47 IST)
ವಿಶ್ವವಿಖ್ಯಾತ ಮೈಸೂರು ದಸರಾಗೆ ಕೆಲವೇ ದಿನಗಳು ಬಾಕಿಯಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಂಭ್ರಮ ಮನೆ ಮಾಡಿದೆ. ಈಗಾಗಲೇ ಅರಮನೆಗೆ ದಸರಾ ಆನೆಗಳ ಮೊದಲ ತಂಡ ಆಗಮಿಸಿದ್ದು, ಸೆ. 26ಕ್ಕೆ ಎರಡನೇ ತಂಡದ 5 ಆನೆಗಳು ಬರಲಿವೆ. 3 ಹೊಸ ಆನೆ ಸೇರಿದಂತೆ 5 ಆನೆಗಳು ಅರಮನೆಗೆ ಬರಲಿದ್ದು, ನಂತರ 14 ಆನೆಗಳಿಗೂ ತಾಲೀಮು ನೀಡಲಾಗುತ್ತದೆ. ಬಂಡೀಪುರ-ರಾಂಪುರ ಕ್ಯಾಂಪ್‌ನಿಂದ ರೋಹಿತ್ ಹಾಗೂ ಹಿರಣ್ಯ ಆನೆ, ದೊಡ್ಡ ಹರವೆ ಕ್ಯಾಂಪ್‌ನಿಂದ ಲಕ್ಷ್ಮಿ ಆನೆ, ದುಬಾರೆ ಕ್ಯಾಂಪ್‌ನಿಂದ ಸುಗ್ರೀವ ಹಾಗೂ ಪ್ರಶಾಂತ ಆನೆಗಳು ಮೈಸೂರಿಗೆ ಬರಲಿವೆ.