ಈ ಖದೀಮರಿಗೆ ಇಂಗ್ಲಿಷ್ ಸಿನಿಮಾವೇ ಪ್ರೇರಣೆ!

ಮಂಗಳವಾರ, 28 ನವೆಂಬರ್ 2017 (09:17 IST)
ಬೆಂಗಳೂರು: ಎಟಿಎಂ ಕದ್ದೊಯ್ಯುತ್ತಿದ್ದ ಖದೀಮರನ್ನು ಬೇಟೆಯಾಡಿದ ಬೆಂಗಳೂರು ಪೊಲೀಸರಿಗೆ ಅಚ್ಚರಿಯ ವಿವರ ಲಭ್ಯವಾಗಿದೆ.
 

ಕೋಣನಕುಂಟೆ ವ್ಯಾಪ್ತಿಯ ಎಟಿಎಂ ಯಂತ್ರ ಕದ್ದೊಯ್ದ ಆರೋಪದಲ್ಲಿ ಸಹೋದರರು ಸೇರಿದಂತೆ ನಾಲ್ವರನ್ನು ಬಂಧಿಸಿದ ಪೊಲೀಸರು ಲಕ್ಷಾಂತರ ಹಣ ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಕಳ್ಳರು ತಮಗೆ ಈ ರೀತಿ ಕಳ್ಳತನ ಮಾಡಲು ಪ್ರೇರಣೆ ಏನೆಂದು ಬಾಯ್ಬಿಟ್ಟಿದ್ದಾರೆ.

ದರೋಡೆಗೆ ಸಂಬಂಧಿಸಿದ ಇಂಗ್ಲಿಷ್ ಸಿನಿಮಾ ನೋಡುತ್ತಿದ್ದ ಖದೀಮರು ಅದರ ಪ್ರೇರಣೆಯಿಂದಲೇ ಬ್ಯಾಂಕ್ ದರೋಡೆ ನಡೆಸಿದ್ದರು ಎಂದು ಗೊತ್ತಾಗಿದೆ. ಈ ಕಳ್ಳತನಕ್ಕೂ ಮೊದಲು ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಿ ಅದೇ ಗುಂಗಿನಲ್ಲಿ ಕೃತ್ಯವೆಸಗಿದ್ದರಂತೆ. ಇದೀಗ ಕಳ್ಳರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಈ ನಾಯಿಗೆ ಅದೆಂಥಾ ಪವರ್ ಇತ್ತು ಗೊತ್ತಾ?! ನೀವೇ ನೋಡಿ (ವಿಡಿಯೋ)