Publish Date: Thu, 23 Nov 2017 (10:27 IST)
Updated Date: Thu, 23 Nov 2017 (10:29 IST)
ನವದೆಹಲಿ: ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಸಾಮಾನ್ಯವಾಗಿಬಿಟ್ಟಿದೆ. ಆದರೆ ದೆಹಲಿಯ ಮ್ಯಾಕ್ಸ್ ಫೋರ್ಟ್ ಶಾಲೆಯಲ್ಲಿ ನಾಲ್ಕು ವರ್ಷದ ಬಾಲಕನೋರ್ವ ಸಹಪಾಠಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಹಿನ್ನಲೆಯಲ್ಲಿ ಅರೆಸ್ಟ್ ಆಗಿದ್ದಾನೆ!
ಶುಕ್ರವಾರ ಶಾಲೆಯಿಂದ ಮನೆಗೆ ಬಂದ ಬಾಲಕಿ ತನ್ನ ಗುಪ್ತಾಂಗದಲ್ಲಿ ನೋವಾಗುತ್ತಿದೆಯೆಂದು ಹೆತ್ತವರ ಬಳಿ ನೋವು ತೋಡಿಕೊಂಡಿದ್ದಳು. ಮರುದಿನ ತನ್ನ ಮೇಲಾದ ಘಟನೆಯನ್ನು ವಿವರಿಸಿದ್ದಳು. ಇದಾದ ಬಳಿಕ ಬಾಲಕಿಯ ಪೋಷಕರು ಪೊಲೀಸರಿಗೆ ಬಾಲಕನ ವಿರುದ್ಧ ದೂರು ನೀಡಿದ್ದಾರೆ.
ಬಾಲಕಿಯ ಪೋಷಕರ ಪ್ರಕಾರ ಶಾಲೆಯ ಅವಧಿಯಲ್ಲೇ ಈ ಘಟನೆ ನಡೆದಿದೆ. ಆಪಾದಿತ ಬಾಲಕ ಬಾಲಕಿಯ ಪ್ಯಾಂಟ್ ಬಿಚ್ಚಿಸಿ ಬಾಲಕಿಯ ಗುಪ್ತಾಂಗಕ್ಕೆ ಬೆರಳು ತೂರಿಸಿದ್ದಾನೆ ಎನ್ನಲಾಗಿದೆ. ಬಾಲಕಿ ಪ್ರತಿಭಟಿಸಿದರೂ ಪ್ರಯೋಜನವಾಗಿಲ್ಲ ಎಂದು ಪೋಷಕರು ದೂರಿನಲ್ಲಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ