Select Your Language

Notifications

webdunia
webdunia
webdunia
webdunia

ಇಂಜಿನಿಯರಿಂಗ್ ಶುಲ್ಕ ಏರಿಕೆ: ವಿಚಾರ ಮಾಡ್ತೀವಿ ಎಂದು ಸಿದ್ದರಾಮಯ್ಯ ಸರ್ಕಾರ 10 ಶೇಕಡಾ ಏರಿಕೆಗೆ ಅಸ್ತು

Student

Krishnaveni K

ಬೆಂಗಳೂರು , ಸೋಮವಾರ, 17 ಜೂನ್ 2024 (09:47 IST)
ಬೆಂಗಳೂರು: ಸಿಇಟಿ ಫಲಿತಾಂಶ ಬಂದ ಖುಷಿಯಲ್ಲಿ ಇಂಜಿನಿಯರಿಂಗ್ ಗೆ ಸೇರ್ಪಡೆಯಾಗಲು ಹೊರಟ ವಿದ್ಯಾರ್ಥಿಗಳಿಗೆ ಶಾಕ್ ಎದುರಾಗಿದೆ. ಪೇಮೆಂಟ್ ಸೀಟು ಅಲ್ಲದೆ, ಸರ್ಕಾರಿ ಕೋಟಾದಡಿ ಸಿಗುವ ಸೀಟಿನ ಶುಲ್ಕ ಕೂಡಾ ಈ ವರ್ಷದ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿದೆ.

ಈ ಬಾರಿ ಹೆಚ್ಚು ವಿದ್ಯಾರ್ಥಿಗಳು ಇಂಜಿನಿಯರಿಂಗ್ ಬರೆದಿದ್ದು ಒಂದೆಡೆಯಾದರೆ ಪ್ರಶ್ನೆ ಪತ್ರಿಕೆ ಗೊಂದಲದಿಂದಾಗಿ ಕೆಲವರಿಗೆ ನಿರೀಕ್ಷಿತ ಅಂಕ ಬಂದಿಲ್ಲ ಎಂಬ ನಿರಾಸೆಯಲ್ಲಿದ್ದರು. ಇದರ ನಡುವೆ ಪೇಮೆಂಟ್ ಸೀಟಿನ ಶುಲ್ಕ ಕೇಳಿಕೊಂಡು ಹೋದ ಪೋಷಕರಿಗೆ ಖಾಸಗಿ ಕಾಲೇಜುಗಳು ಅಕ್ಷರಶಃ ಶಾಕ್ ಕೊಟ್ಟಿದ್ದರು. ಗ್ರಾಮೀಣ ಭಾಗದಲ್ಲೇ ಫೀಸ್ 4-5 ಲಕ್ಷ ರೂ. ತಲುಪಿತ್ತು.

ಇದರ ನಡುವೆ ಸರ್ಕಾರಿ ಕೋಟಾದಡಿ ಬರುವ ಇಂಜಿನಿಯರಿಂಗ್ ಶುಲ್ಕ ಏರಿಕೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಇದರೊಂದಿಗೆ 96,574 ರೂ ಇದ್ದ ಫೀಸ್ 1,06, 231 ರೂ ಗೆ ಏರಿಕೆಯಾಗಿದೆ. ಈಗಾಗಲೇ ಮ್ಯಾನೇಜ್ ಮೆಂಟ್ ಕೋಟಾದಡಿಯಲ್ಲಿ ಬರುವ ಕಾಲೇಜುಗಳು ಬೇಕಾಬಿಟ್ಟಿ ಫೀಸ್ ವಸೂಲಿ ಮಾಡುತ್ತಿವೆ. ಇದರ ನಡುವೆ ಸರ್ಕಾರೀ ಫೀಸ್ ಕೂಡಾ ಹೆಚ್ಚಾಗಿದೆ.

ಇತ್ತೀಚೆಗಷ್ಟೇ ಖಾಸಗಿ ಕಾಲೇಜುಗಳ ಒಕ್ಕೂಟ 10-15 ಶೇಕಡಾ ಫೀಸ್ ಹೆಚ್ಚಳ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿತ್ತು. ಇದರ ಬಗ್ಗೆ ಸಿಎಂ ಸಿದ್ದರಾಮಯ್ಯನವರ ಬಳಿ ಮಾಧ್ಯಮಗಳು ಪ್ರಶ್ನಿಸಿದಾಗ, ಇಲ್ಲ ನಾವು ವಿಚಾರ ಮಾಡ್ತೀವಿ ಎಂದಿದ್ದರು. ಆದರೆ ಸರ್ಕಾರವೇ ಈಗ 10 ಶೇಕಡಾ ಏರಿಕೆಗೆ ಅನುಮತಿ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗ್ಯಾರಂಟಿ ಯೋಜನೆಗಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಇಂದು ಬಿಜೆಪಿಯಿಂದ ಸಿದ್ದರಾಮಯ್ಯ ಮನೆಗೆ ಮುತ್ತಿಗೆ