Select Your Language

Notifications

webdunia
webdunia
webdunia
Saturday, 5 April 2025
webdunia

ಡಿಕೆ ಸುರೇಶ್ ಸೋಲಿಗೆ ಸಿಎಂ ಸಿದ್ದರಾಮಯ್ಯ ಮಾಸ್ಟರ್ ಪ್ಲ್ಯಾನ್ ಮಾಡಿದ್ದರಂತೆ

CM Siddaramaiah

Krishnaveni K

ಬೆಂಗಳೂರು , ಶನಿವಾರ, 8 ಜೂನ್ 2024 (15:19 IST)
ಬೆಂಗಳೂರು: ಈ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಡಿಕೆ ಶಿವಕುಮಾರ್ ಸಹೋದರ, ಡಿಕೆ ಸುರೇಶ್ ಸೋಲಿಗೆ ಸಿಎಂ ಸಿದ್ದರಾಮಯ್ಯ ಮತ್ತು ಟೀಂ ತಂತ್ರಗಾರಿಕೆಯೇ ಕಾರಣ ಎಂದು ಶಾಸಕ ಸುರೇಶ್ ಗೌಡ ಗಂಭೀರ ಆರೋಪ ಮಾಡಿದ್ದಾರೆ.

ಒಂದು ವೇಳೆ ಡಿಕೆ ಸುರೇಶ್ ಗೆದ್ದಿದ್ದರೆ ಡಿಕೆ ಶಿವಕುಮಾರ್ ಗೆ ಅದು ಪ್ಲಸ್ ಪಾಯಿಂಟ್ ಆಗುತ್ತಿತ್ತು. ಈ ಲೋಕಸಭೆ ಚುನಾವಣೆ ಗೆಲುವಿನ ಬಳಿಕ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಹುದ್ದೆಗೆ ಬೇಡಿಕೆಯಿಡಲಿದ್ದಾರೆ ಎಂಬ ಸುದ್ದಿಗಳಿತ್ತು. ಅದರ ಬೆನ್ನಲ್ಲೇ ಈಗ ಸಹೋದರನ ಸೋಲು ಡಿಕೆಶಿಗೆ ಹಿನ್ನಡೆಯಾಗಿದೆ.

ಇದರ ನಡುವೆ ಶಾಸಕ ಸುರೇಶ್ ಗೌಡ, ಸಿದ್ದರಾಮಯ್ಯ, ಪರಮೇಶ್ವರ್, ಜಾರಕಿಹೊಳಿ ಎಲ್ಲರೂ ಸೇರಿಕೊಂಡು ಸುರೇಶ್ ಸೋಲಿಸಲಿದ್ದಾರೆ  ಎಂದು ಒಂದು ತಿಂಗಳ ಹಿಂದೆಯೇ ಹೇಳಿದ್ದೆ. ಅದೀಗ ನಿಜವಾಗಿದೆ. ಸಿದ್ದರಾಮಯ್ಯನವರೇ ಸಿಎಂ ಆಗಿಯೇ ಮುಂದುವರಿಯಬೇಕು ಎಂದು ಒಂದು ಅಹಿಂದಾ ಟೀಂ ಕೆಲಸ ಮಾಡುತ್ತಲೇ ಇರುತ್ತದೆ. ಅದೇ ಟೀಂ ಈಗ ಡಿಕೆ ಸುರೇಶ್ ಅವರನ್ನು ಸೋಲಿಸಿದೆ. ಇದೆಲ್ಲಾ ಸಂಚಿನ ಭಾಗ.

ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಬಾರದೆಂದು ಈ ರೀತಿ ಮಾಡಿದ್ದಾರೆ. ಡಿಕೆಶಿ ನೈತಿಕತೆ ಕುಸಿಯಬೇಕು ಎಂದು ಮಾಡಿದ್ದಾರೆ. ಈಗ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲ್ಲ. ಕಾಂಗ್ರೆಸ್ ನಲ್ಲಿ ಒಳಜಗಳವಾಗುತ್ತದೆ. ರಾಜಕೀಯ ಧ್ರವೀಕರಣವಾಗುತ್ತದೆ. ಸಿದ್ದರಾಮಯ್ಯ ಸರ್ಕಾರ ಪತನವಾಗಲಿದೆ ಎಂದು ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ನಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಪಾತ್ರವೇನು ಇಂದು ನಿರ್ಧಾರ