Select Your Language

Notifications

webdunia
webdunia
webdunia
webdunia

ಅರ್ಭಿ ಫಾಲ್ಸ್ ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ನೀರುಪಾಲು!

falls
bengaluru , ಮಂಗಳವಾರ, 3 ಆಗಸ್ಟ್ 2021 (16:33 IST)
ಈಜಲು ಹೋದ ವಿದ್ಯಾರ್ಥಿನಿಯೊಬ್ಬಳು ನೀರಿನಲ್ಲಿ ಮುಳುಗಿ ಸಾವನ್ನಪಿದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿರುವ ಅರ್ಭಿ ಫಾಲ್ಸ್ ನಲ್ಲಿ ಸೋಮವಾರ ಸಂಭವಿಸಿದೆ.
ವರ್ಷಿತಾ ನೀರಿನಲ್ಲಿ ಮುಳುಗಿ ಮೃತಪಟ್ಟ
ವಿದ್ಯಾರ್ಥಿನಿ, ಮೂಲತಃ ಮಂಗಳೂರಿನವಳಾದ ವರ್ಷಿತಾ ಕಾರ್ಕಳದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಯೊಟೆಕ್ ವಿಭಾಗದಲ್ಲಿ ಕಲಿಯುತಿದ್ದಳು ಎನ್ನಲಾಗಿದೆ.
ಈಕೆ ವಿದ್ಯಾರ್ಥಿಗಳಿಬ್ಬರ ಜೊತೆ ಫಾಲ್ಸ್ ಗೆ ತೆರಳಿದ್ದು ಈಜಲೆಂದು ನೀರಿಗೆ ಇಳಿದಾಗ ಮುಳುಗಿದ್ದಾಳೆ ಎನ್ನಲಾಗಿದೆ. ಬಳಿಕ ಅಗ್ನಿಶಾಮಕ ದಳದ ಸಹಾಯದಿಂದ ಮೃತದೇಹವನ್ನು ನೀರಿನಿಂದ ಮೇಲಕ್ಕೆ ತರಲಾಯಿತು. ಅರ್ಭಿ ಫಾಲ್ಸ್ ನಿಷೇಧಿತ ಪ್ರದೇಶವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೆಕ್ಕಪರಿಶೋಧಕನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ!