Publish Date: Tue, 03 Aug 2021 (16:30 IST)
Updated Date: Tue, 03 Aug 2021 (16:32 IST)
ಕರಂಬಳ್ಳಿ ವಿ.ಎಮ್ ನಗರದ ನಿವಾಸಿ ಶೇಖರ್ ಅವರ ಪುತ್ರ ಸತೀಶ್ ಕುಮಾರ್ (54) ಮೃತ ವ್ಯಕ್ತಿ.
ಮಂಗಳವಾರ ಮೃತದೇಹ ಪತ್ತೆಯಾಗಿದ್ದು, ಅಗ್ನಿಶಾಮಕ ದಳದ ಸಹಾಯದಿಂದ ಕಳೇಬರವನ್ನು ಮೇಲೆತ್ತಲಾಗಿದೆ. ವ್ಯಕ್ತಿ ಮೃತಪಟ್ಟು ಒಂದು ವಾರ ಕಳೆದಿರಬಹುದೆಂದು ಶಂಕಿಸಲಾಗಿದೆ.
ಕಳೇಬರವನ್ನು ವೈದ್ಯಕೀಯ ಪರೀಕ್ಷೆಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದ್ದು, ಮಣಿಪಾಲ ಪೊಲೀಸ್ ಠಾಣೆಯ ಠಾಣಾಧಿಕಾರಿ ರಾಜಶೇಖರ್ ಹೊಂದಾಳಿ ಘಟನಾ ಸ್ಥಳದಲ್ಲಿದ್ದ ಕಾನೂನು ಪ್ರಕ್ರಿಯೆ ನಡೆಸಿದರು. ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.