Select Your Language

Notifications

webdunia
webdunia
webdunia
webdunia

ರಾಜ್ಯ ಬಿಜೆಪಿಯಲ್ಲಿ‌ ಮುಗಿಯದ ಅಸಮಾಧಾನ..!

ರಾಜ್ಯ ಬಿಜೆಪಿಯಲ್ಲಿ‌ ಮುಗಿಯದ ಅಸಮಾಧಾನ..!
bangalore , ಗುರುವಾರ, 29 ಜೂನ್ 2023 (20:16 IST)
ನೂತನ ಸರ್ಕಾರದಲ್ಲಿ ವರ್ಗಾವಣೆ ದಂಧೆ ಹೆಚ್ಚಾಗುತ್ತಿದ್ದು ಸಿಎಂ ಕಚೇರಿ ಸಿಬ್ಬಂದಿಗಳು ‌ ವರ್ಗಾವಣೆ ‌ಫೈಲ್ ಟೈಪಿಸುದ್ರಲ್ಲೇ ಬ್ಯೂಸಿ ಆಗಿದ್ದಾರೆ ಅಂತಾ ಮಾಜಿ ಸಿಎಂ ಹೆಚ್  ಡಿ ಕುಮಾರಸ್ವಾಮಿ ಆರೋಪಿಸಿದ್ರು. ಹಾಗೆ ಒಂದೇ ಹುದ್ದೆಗೆ ನಾಲ್ವರಿಗೆ ಶಿಪಾರಸ್ಸು ಪತ್ರ ಕೊಟ್ಟಿದ್ದು ಕೂಡ ದೊಡ್ಡ ಚರ್ಚೆಯಾಗ್ತಿದೆ. ಬಿಜೆಪಿ ಪದೇ ಪದೇ ಎಟಿಎಂ ಸರ್ಕಾರ ಅಂತ ಜರಿಯುತ್ತಿದೆ.ಹೀಗಾಗಿ ನಿನ್ನೆಯ ಕ್ಯಾಬಿನೇಟನಲ್ಲೂ ವರ್ಗಾವಣೆ ವಿಚಾರದ ಬಗ್ಗೆ ಚರ್ಚೆಯಾಗಿದ್ದು,ವರ್ಗಾವಣೆ ದಂಧೆ ಆರೋಪದಲ್ಲಿ ಹುರುಳಿದ್ಯೋ ಇಲ್ವೋ ಗೊತ್ತಿಲ್ಲ.ಆದ್ರೆ ಈ ವಿಚಾರ ವಿಪಕ್ಷಗಳಿಗೆ ಅಹಾರವಾಗ್ತಿದೆ.ಹೀಗಾಗಿ ಸಚಿವರುಗಳು ವರ್ಗಾವಣೆ ಗೆ ಕಡಿವಾಣ ಹಾಕುವಂತೆ ಸಿಎಂಗೆ ಮನವಿ ಮಾಡಿದ್ದಾರೆ. ಸರ್ಕಾರ ಸರಿಯಾಗಿ ಟೇಕ್ ಆಫ್ ಆಗ್ತಿದ್ದೆ...ಗ್ಯಾರಂಟಿ ಜಾರಿ ಬಳಿಕ ಸರ್ಕಾರದ ವರ್ಚಸ್ಸು ಹೆಚ್ಚಿದೆ.ಈ ಸಂದರ್ಭದಲ್ಲಿ ಸರ್ಕಾರಕ್ಕೆ ಡ್ಯಾಮೇಜ್ ಆಗೋದು ಬೇಡ ಎಂದು ಕೆಲ ಸಚಿವರು‌ ಸಿಎಂಗೆ  ಸಲಹೆ ನೀಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಮೈತ್ರಿ ಹಾಗೂ ಬಿಜೆಪಿ ಸರ್ಕಾರ ಇರೋದ್ರಿಂದ  ವರ್ಗಾವಣೆ ಕಾಂಗ್ರೆಸ್ ‌ಗೆ ಬೇಕಾದಂತೆ ಆಗಿರಲಿಲ್ಲ. ಈಗ ವರ್ಗಾವಣೆಯಲ್ಲಿ ಸರ್ಕಾರ ಬ್ಯುಸಿಯಾಗಿದ್ದು‌,ವರ್ಗಾವಣೆ ಬರದಿಂದ ಸಾಗಿದೆ.ಇಲ್ಲಿ ಆಯಕಟ್ಟಿನ ಜಾಗಕ್ಕೆ ಸಿಎಂ ಸಿದ್ದರಾಮಯ್ಯ ಆಪ್ತರಿಗೆ ಪೋಸ್ಟಿಂಗ್ ಹಾಕಿಸಿಕೊಳ್ಳಲಾಗ್ತಿದೆ.ಈ ವಿಚಾರದಲ್ಲಿ ಡಿ ಕೆ ಶಿ ಗೆ ಹಿನ್ನಡೆಯಾಗ್ತಿದೆ.ಸಿದ್ದು ಮತ್ತು ಡಿಕೆ ನಡುವಿನ ಕೋಲ್ಡ್ ವಾರ್ ಮುಂದುವರಿದಿದ್ದು ಒಂದು ಹುದ್ದೆಗೆ ಮೂರ್ನಾಲ್ಕು ಶಿಫಾರಸ್ಸು ಪತ್ರ ವಿಚಾರವೂ ಹೈಕಮಾಂಡ್ ಗೆ ತಲುಪುತ್ತಾ ಎಂಬ ಚರ್ಚೆ ಶುರುವಾಗಿದೆ.ಎರಡು ದಿನ ದೆಹಲಿಯಲ್ಲೇ ಬೀಡು ಬಿಟ್ಟಿರುವ ಡಿ.ಕೆ ಶಿವಕುಮಾರ್,ಖರ್ಗೆ, ಸೋನಿಯಾ, ರಾಹುಲ್ ಭೇಟಿ ಮಾಡಲಿದ್ದಾರೆ. ಈ ಸಂದರ್ಭದಲ್ಲಿಪಕ್ಷದ ಆಂತರಿಕ ವಿಚಾರ, ಆಡಳಿತ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.ಈ ಸಂದರ್ಭದಲ್ಲಿ ವರ್ಗಾವಣೆ ದಂಧೆ ವಿಚಾರವೂ ಚರ್ಚೆಯಾಗಲಿದೆ ಅಂತ ಪಕ್ಷದ ವಲಯದಲ್ಲೇ ಚರ್ಚೆ ಶುರುವಾಗಿದೆ..

Share this Story:

Follow Webdunia kannada

ಮುಂದಿನ ಸುದ್ದಿ

ಎಸ್ ಎಸ್ ಎಲ್ ಸಿ ಪೂರಕ ಫಲಿತಾಂಶ ನಾಳೆ ಪ್ರಕಟ