Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ವಿದ್ಯುತ್ ಕೊರತೆ: ಕೈ ಕೊಡುತ್ತಿರುವ ಕರೆಂಟ್ ಗೆ ಆಕ್ರೋಶ

ರಾಜ್ಯದಲ್ಲಿ ವಿದ್ಯುತ್ ಕೊರತೆ: ಕೈ ಕೊಡುತ್ತಿರುವ ಕರೆಂಟ್ ಗೆ ಆಕ್ರೋಶ
ಬೆಂಗಳೂರು , ಗುರುವಾರ, 12 ಅಕ್ಟೋಬರ್ 2023 (09:06 IST)
ಬೆಂಗಳೂರು: ಮಳೆಗಾಲವಾದರೂ ರಾಜ್ಯದಲ್ಲಿ ಪದೇ ಪದೇ ಕರೆಂಟ್ ಕೈ ಕೊಡುತ್ತಿರುವುದು ವಿಪಕ್ಷ, ಜನರಿಂದ ಆಕ್ರೋಶ ವ್ಯಕ್ತವಾಗಿದೆ.

ಮಳೆಗಾಲ ಕೈ ಕೊಟ್ಟಿರುವುದರಿಂದ ರಾಜ್ಯದಲ್ಲಿ ಬರಗಾಲದ ವಾತಾವರಣವಿದೆ. ಹೀಗಾಗಿ ವಿದ್ಯುತ್ ಅಭಾವ ಉಂಟಾಗಿದೆ. ವಿದ್ಯುತ್ ವ್ಯತ್ಯಯದ ಬಗ್ಗೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ವಿಪಕ್ಷ ನಾಯಕರೂ ಕರೆಂಟ್ ಕೊಡದೇ ಇದ್ದರೆ ಕಚೇರಿಗಳಿಗೆ ಬೀಗ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ನಡುವೆ ರಾಜ್ಯ ಸರ್ಕಾರ ವಿದ್ಯುತ್ ಅಭಾವ ನೀಗಿಸಲು ನೆರೆ ರಾಜ್ಯಗಳ ಮೊರೆ ಹೋಗಿದೆ. ವಿದ್ಯುತ್ ಅಭಾವದ ಬೆನ್ನಲ್ಲೇ ಕೇಂದ್ರ ಸರ್ಕಾರ ಮೊರೆ ಹೋಗಿರುವ ರಾಜ್ಯ ಸರ್ಕಾರ, ಕೇಂದ್ರೀಯ ಉತ್ಪಾದನಾ ಘಟಕಗಳಿಂದ ವಿದ್ಯುತ್ ಪೂರೈಸುವಂತೆ ಮನವಿ ಮಾಡಿದೆ. ಶೀಘ್ರದಲ್ಲೇ ವಿದ್ಯುತ್ ಅಭಾವಕ್ಕೆ ಪರಿಹಾರ ಕಂಡುಕೊಳ್ಳದೇ ಇದ್ದರೆ ಜನರ ಆಕ್ರೋಶ ಮತ್ತಷ್ಟು ಹೆಚ್ಚಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ಮ ಕ್ಷೇತ್ರದ ಜನತೆಗೋಸ್ಕರ ಎಲ್ಲಿ ಬೇಕಾದ್ರು ಹೋಗ್ತೇನೆ- ಮುನಿರತ್ನ