ಬೆಂಗಳೂರು: ಕೊರೋನಾ, ಲಾಕ್ ಡೌನ್ ನಿಂದ ಉದ್ಯೋಗವಿಲ್ಲದೇ ತತ್ತರಿಸಿರುವ ಜನತೆಗೆ ಸರ್ಕಾರ ವಿದ್ಯುತ್ ಶಾಕ್ ಕೊಡಲು ಮುಂದಾಗಿದೆ.
ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ ಏಪ್ರಿಲ್ 1 ರಿಂದಲೇ ಪೂರ್ವಾನ್ವಯವಾಗುವಂತೆ ಪ್ರತಿ ಯೂನಿಟ್ ಗೆ 30 ಪೈಸೆ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಏಪ್ರಿಲ್, ಮೇ ತಿಂಗಳ ಪರಿಷ್ಕರಣೆಯನ್ನು ಯಾವುದೇ ಬಡ್ಡಿ ವಿಧಿಸದೇ ಅಕ್ಟೋಬರ್-ನವಂಬರ್ ನಲ್ಲಿ ವಸೂಲು ಮಾಡಲು ಸೂಚಿಸಿದೆ.
ಇದರೊಂದಿಗೆ ಪ್ರತಿ ಯೂನಿಟ್ ಗೆ ವಿದ್ಯುತ್ ದರ 3.84 ರಷ್ಟು ಹೆಚ್ಚಳವಾಗಲಿದೆ. ಇದರೊಂದಿಗೆ ನಿಮ್ಮ ವಿದ್ಯುತ್ ಶುಲ್ಕದಲ್ಲಿ ಎಂದಿಗಿಂತ ಸುಮಾರು 10-20 ರೂ.ಗಳಷ್ಟು ಹೆಚ್ಚಳವಾಗಲಿದೆ. ಕಳೆದ ಒಂದು ವರ್ಷದಲ್ಲಿ ಇದು ಮೂರನೇ ಬಾರಿ ಏರಿಕೆ ಮಾಡುತ್ತಿರುವುದು ಎಂಬುದು ಗಮನಿಸಬೇಕಾದ ಅಂಶ.