Publish Date: Thu, 12 Apr 2018 (09:50 IST)
Updated Date: Thu, 12 Apr 2018 (09:52 IST)
ಬೆಂಗಳೂರು: ಇಂದು ವರನಟ ಡಾ. ರಾಜ್ ಪುಣ್ಯ ತಿಥಿ. ಆದರೆ ಪ್ರತಿ ವರ್ಷದಂತೆ ಅಣ್ಣಾವ್ರ ಪುಣ್ಯತಿಥಿಯನ್ನು ಆಚರಿಸುವ ಅಭಿಮಾನಿಗಳಿಗೆ ಈ ಬಾರಿ ಅಡ್ಡಿ ಎದುರಾಗಿದೆ.
ಮೇ 12 ರಂದು ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ರಾಜ್ಯದಲ್ಲಿ ಇದೀಗ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಗುಂಪು ಕಟ್ಟಿಕೊಂಡು ಈ ರೀತಿ ಸಾರ್ವಜನಿಕ ಕಾರ್ಯಕ್ರಮಗಳನ್ನು ಮಾಡುವುದಕ್ಕೆ ನಿರ್ಬಂಧವಿದೆ.
ಈ ಹಿನ್ನಲೆಯಲ್ಲಿ ಡಾ. ರಾಜ್ ಸ್ಮರಣೆಯಲ್ಲಿ ಅನ್ನದಾನ, ರಕ್ತದಾನ ಶಿಬಿರ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ರಾಜ್ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಹಾಗಿದ್ದರೂ ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್ ಸಮಾಧಿಗೆ ಬೆಳಗ್ಗಿನಿಂದಲೇ ಜನಸಾಗರ ಹರಿದುಬರುತ್ತಿದ್ದು, ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.