Publish Date: Fri, 27 Sep 2019 (11:14 IST)
Updated Date: Fri, 27 Sep 2019 (11:21 IST)
ಮಂಡ್ಯ : ತನ್ನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ತಮ್ಮನನ್ನು ಅಣ್ಣನೇ ಬರ್ಬರವಾಗಿ ಕೊಲೆ ಮಾಡಿದ ಘಟನೆ ಗುರುವಾರ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ನಡೆದಿದೆ.
ಮಹೇಂದ್ರ (40) ಕೊಲೆಯಾದ ತಮ್ಮ, ಮಂಜುನಾಥ್ ಕೊಲೆ ಮಾಡಿದ ಅಣ್ಣ. ಮಂಜುನಾಥ್ ಪತ್ನಿ ಜೊತೆ ಮಹೇಂದ್ರ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ವಿಚಾರಕ್ಕೆ ಹಲವು ಬಾರಿ ಇಬ್ಬರ ನಡುವೆ ಜಗಳ ನಡೆದಿತ್ತು. ಆದರೆ ಗುರುವಾರ ಈ ಜಗಳ ವಿಕೋಪಕ್ಕೇರಿ ರಾತ್ರಿ ಮಹೇಂದ್ರ ಮಲಗಿದ್ದಾಗ ಮಾರಕಾಸ್ತ್ರ ಬಳಸಿ ಮಂಜುನಾಥ್ ಅನೇಕ ಬಾರಿ ಇರಿದಿದ್ದು, ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಅಣ್ಣನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.