Select Your Language

Notifications

webdunia
webdunia
webdunia
webdunia

ವರ್ಷಕ್ಕೆ 3 ವಾರ್ಷಿಕ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿರ್ಧಾರ : ಹೊಸ ವ್ಯವಸ್ಥೆ ಹೇಗೆ?

ವರ್ಷಕ್ಕೆ 3 ವಾರ್ಷಿಕ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿರ್ಧಾರ : ಹೊಸ ವ್ಯವಸ್ಥೆ ಹೇಗೆ?
ಬೆಂಗಳೂರು , ಶುಕ್ರವಾರ, 8 ಸೆಪ್ಟಂಬರ್ 2023 (09:43 IST)
ಬೆಂಗಳೂರು : ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆ ವ್ಯವಸ್ಥೆಯಲ್ಲಿ ಹೊಸ ವಿಧಾನ ಜಾರಿಗೆ ತರಲು ಶಿಕ್ಷಣ ಇಲಾಖೆ ಮುಂದಾಗಿದೆ. ಇನ್ಮುಂದೆ ಒಂದು ವರ್ಷದಲ್ಲಿ ಮೂರು ವಾರ್ಷಿಕ ಪರೀಕ್ಷೆ ನಡೆಸಲು ಇಲಾಖೆ ನಿರ್ಧರಿಸಿದೆ.

ದ್ವೀತಿಯ ಪಿಯುಸಿ ಮತ್ತು SSLC ಪರೀಕ್ಷೆಗಳನ್ನ ವರ್ಷದಲ್ಲಿ 3 ಬಾರಿ ಮಾಡಲು ನಿರ್ಧರಿಸಲಾಗಿದೆ. ವಾರ್ಷಿಕ ಪರೀಕ್ಷೆ, ಪೂರಕ ಪರೀಕ್ಷೆ ವ್ಯವಸ್ಥೆ ಕೈಬಿಡಲಾಗುವುದು. ಪರೀಕ್ಷೆ 1, ಪರೀಕ್ಷೆ 2, ಪರೀಕ್ಷೆ 3 ಹೆಸರಿನಲ್ಲಿ ಪರೀಕ್ಷೆ ನಡೆಸಲಾಗುವುದು. ಈ ವರ್ಷದಿಂದ ಹೊಸ ವ್ಯವಸ್ಥೆ ಜಾರಿಯಾಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. 

* ವಿದ್ಯಾರ್ಥಿಗಳು ಒಂದು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದರೆ ಇನ್ನೊಂದು ಪರೀಕ್ಷೆ ಬರೆಯಬಹುದು. ಅದರಲ್ಲಿ ಕಡಿಮೆ ಬಂದರೆ 3 ನೇ ಪರೀಕ್ಷೆ ಬರೆಯಬಹುದು.

* 2 ಮತ್ತು 3 ನೇ ಪರೀಕ್ಷೆಯಲ್ಲಿ ಮೊದಲ ಪರೀಕ್ಷೆಗಿಂತ ಕಡಿಮೆ ಅಂಕ ಬಂದಿದ್ದರೆ, ಎರಡು ಪರೀಕ್ಷೆ ಬರೆದರೂ ಮೊದಲ ಪರೀಕ್ಷೆಯ ಅಂಕಗಳನ್ನೆ ಉಳಿಸಿಕೊಳ್ಳಬಹುದು.
* ಯಾವುದಾದರೂ ಒಂದು ವಿಷಯದಲ್ಲಿ ಕಡಿಮೆ ಅಂಕ ಬಂದಿದೆ ಅಂತ ಅನ್ನಿಸಿದರೆ ಅ ವಿದ್ಯಾರ್ಥಿಯೂ 2 ಮತ್ತು ಮೂರನೇ ಪರೀಕ್ಷೆಯಲ್ಲಿ ಆ ಒಂದು ವಿಷಯವನ್ನು ಪ್ರತ್ಯೇಕವಾಗಿ ಬರೆದು ಹೆಚ್ಚು ಅಂಕ ಪಡೆದುಕೊಳ್ಳಬಹುದು.
* ಮೊದಲ ಪರೀಕ್ಷೆಯಲ್ಲಿ ಫೇಲ್ ಆದರೂ ಅ ವಿದ್ಯಾರ್ಥಿಯನ್ನ ಫೇಲ್ ಅಂತ ಕರೆಯುವುದಿಲ್ಲ. ಆತ 2, 3 ನೇ ಪರೀಕ್ಷೆ ಬರೆದು ಪಾಸ್ ಆಗಬಹುದು.
* ವಿದ್ಯಾರ್ಥಿ 1, 2, 3 ಪರೀಕ್ಷೆಗಳಲ್ಲಿ ಯಾವ ಪರೀಕ್ಷೆಯಲ್ಲಿ ಪಾಸ್ ಆಗಿರುತ್ತಾನೋ ಅ ಪರೀಕ್ಷೆಯಲ್ಲಿ ಪಾಸ್ ಅಂತ ಅಂಕಪಟ್ಟಿ ನೀಡಲಾಗುತ್ತದೆ.
* 2023-24ನೇ ಸಾಲಿನಿಂದ ಹೊಸ ವ್ಯವಸ್ಥೆ ಜಾರಿಯಾಗಲಿದೆ.

ಹೊಸ ಪರೀಕ್ಷೆ ವ್ಯವಸ್ಥೆ ವೇಳಾಪಟ್ಟಿ
ಪರೀಕ್ಷೆ 1
ಮಾರ್ಚ್ 31 ರಿಂದ ಏಪ್ರಿಲ್ 15ರ ವರೆಗೆ
ಫಲಿತಾಂಶ ಮೇ 8
ಪರೀಕ್ಷೆ 2
ಜೂನ್ 12 ರಿಂದ ಜೂನ್ 19
ಜೂನ್ 29 ಫಲಿತಾಂಶ
ಪರೀಕ್ಷೆ 3
ಜುಲೈ 29 ರಿಂದ ಆಗಸ್ಟ್ 5
ಆಗಸ್ಟ್ 19 ಫಲಿತಾಂಶ

ದ್ವೀತಿಯ ಪಿಯುಸಿ ವೇಳಾಪಟ್ಟಿ
ಪರೀಕ್ಷೆ 1
ಮಾರ್ಚ್ 1 ರಿಂದ ಮಾರ್ಚ್ 25
ಫಲಿತಾಂಶ ಏಪ್ರಿಲ್ 22
ಪರೀಕ್ಷೆ 2
ಮೇ 15 ರಿಂದ ಜೂನ್ 5
ಜೂನ್ 21 ಫಲಿತಾಂಶ
ಪರೀಕ್ಷೆ 3
ಜುಲೈ 12 ರಿಂದ ಜುಲೈ 30
ಆಗಸ್ಟ್ 16 ಫಲಿತಾಂಶ


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ 188 ಹೊಸ ಇಂದಿರಾ ಕ್ಯಾಂಟೀನ್ ಆಹಾರ ಪದ್ಧತಿ