Publish Date: Thu, 06 Oct 2022 (14:30 IST)
Updated Date: Thu, 06 Oct 2022 (14:31 IST)
ಬೆಂಗಳೂರು : ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ನಾಳೆ ಅ.7ರಂದು ಹಾಜರಾಗುವಂತೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಮತ್ತು ಸಂಸದ ಡಿ.ಕೆ ಸುರೇಶ್ಗೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದೆ.
ಡಿ.ಕೆ ಶಿವಕುಮಾರ್ಗೆ ಇಡಿಯಿಂದ ಸಮನ್ಸ್ ಬಂದಿದ್ದು, ನಾಳೆ ದೆಹಲಿಗೆ ವಿಚಾರಣೆಗೆ ಬರಲೇಬೇಕು ಎಂದು ಸಮನ್ಸ್ನಲ್ಲಿ ಉಲ್ಲೇಖಿಸಲಾಗಿದೆ. ಈ ನಡುವೆ ನಾಳೆ ವಿಚಾರಣೆಗೆ ಹಾಜರಾಗದಿರಲು ಡಿ.ಕೆ.ಶಿವಕುಮಾರ್ ಹಾಗೂ ಡಿಕೆ.ಸುರೇಶ್ ನಿರ್ಧರಿಸಿದ್ದಾರೆ.
ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ ಕರ್ನಾಟಕ್ಕೆ ತಲುಪಿ ಮುನ್ನಡೆಯುತ್ತಿದೆ. ಪಾದಯಾತ್ರೆಯಲ್ಲಿ ಭಾಗವಹಿಸಲಿರುವ ಕಾರಣದಿಂದಾಗಿ ವಿಚಾರಣೆಗೆ ಬೇರೆ ದಿನಾಂಕ ನಿಗದಿ ಮಾಡುವಂತೆ ಡಿಕೆ ಬ್ರದರ್ಸ್ ಇಡಿಗೆ ಮನವಿ ಮಾಡಿದ್ದಾರೆ.