Publish Date: Tue, 04 Oct 2022 (13:48 IST)
Updated Date: Tue, 04 Oct 2022 (13:10 IST)
ವಿಜಯಪುರ : ಡಿ.ಕೆ ಶಿವಕುಮಾರ್ ಕಣ್ಣೀರು ನಾಟಕ ಕಂಪನಿ. ಅಳುವ ಗಂಡಸರನ್ನು ನೋಡಬಾರದು. ಡಿಕೆಶಿಗೆ ಅಳುವ ಗಂಡಸು ಎಂದು ಯತ್ನಾಳ್ ವ್ಯಂಗ್ಯವಾಡಿದರು.
ಭಾರತ ಜೋಡೋ ಯಾತ್ರೆಯಲ್ಲಿ ಡಿಕೆಶಿ ಕಣ್ಣೀರು ವಿಚಾರಕ್ಕೆ ಪ್ರತಿಕ್ರಿಯಿಸಿ, ಇವೆಲ್ಲ ನಾಟಕ ಕಂಪನಿ. ಭಾರತ ಜೋಡೋ ಯಾತ್ರೆಯಲ್ಲಿ ಕಣ್ಣೀರು ಹಾಕುವವರೆಲ್ಲ ಮಹಾಕಳ್ಳರು. ಗ್ಲಿಸರಿನ್ ಹಚ್ಚಿಕೊಂಡು ಅಳ್ತಿದ್ದಾರೆ.
ಈ ಪುಣ್ಯಾತ್ಮನಿಗೆ ಹೇಗೆ ಕಣ್ಣೀರು ಬರುತ್ತೆ ಯಾರಿಗೆ ಗೊತ್ತು. ಇವರೆಲ್ಲ ಕಣ್ಣೀರು ಹಾಕೋರಲ್ಲ, ಲೂಟಿ ಹೊಡೆಯುವವರು ಎಂದ ಅವರು, ಕಣ್ಣೀರು ಹಾಕಿದವರು ನಿಮ್ಮ ಆಸ್ತಿಯನ್ನ ಬಡವರಿಗೆ ಹಂಚಿ ಬಿಡಿ ಎಂದು ಯತ್ನಾಳ್ ಸವಾಲೆಸೆದರು.
Ramya kosira
Publish Date: Tue, 04 Oct 2022 (13:48 IST)
Updated Date: Tue, 04 Oct 2022 (13:10 IST)