Select Your Language

Notifications

webdunia
webdunia
webdunia
webdunia

ಡಿಕೆ ಶಿವಕುಮಾರ ವಿರುದ್ಧದ ಇಡಿ ತನಿಖೆ ದುರುದ್ದೇಶದಿಂದ ಕೂಡಿದೆ- ಆರ್.ಧ್ರುವನಾರಾಯಣ್ ಆರೋಪ

ಮೈಸೂರು
ಮೈಸೂರು : ಡಿಕೆ ಶಿವಕುಮಾರ ವಿರುದ್ಧದ ಇಡಿ ತನಿಖೆ ದುರುದ್ದೇಶದಿಂದ ಕೂಡಿದೆ. ಇದು ಸರಿಯಲ್ಲ ಎಂದು ಮಾಜಿ ಸಂಸದ ಆರ್.ಧ್ರುನನಾರಾಯಣ್ ಆರೋಪಿಸಿದ್ದಾರೆ.




ಮೈಸೂರಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಡಿಕೆ ಶಿವಕುಮಾರ್ ತೇಜೋವಧೆ ಮಾಡುವಂತಹ ಕೆಲಸ ಮಾಡುತ್ತಿದ್ದಾರೆ. ಗಣಿಗಾರಿಕೆ,ರಿಯಲ್ ಎಸ್ಟೇಟ್ ಉದ್ಯಮದಿಂದ ಹಣ ಸಂಪಾದನೆ  ಮೈಸೂರಿನಲ್ಲಿ ರಾಮದಾಸ್, ಸಾ.ರಾ.ಮಹೇಶ್ ಮಾಡಿದ್ದರು. ತನಿಖೆ ಮಾಡಲಿ ಆದರೆ ದುರುದ್ದೇಶದಿಂದ ಮಾಡುವುದು ಬೇಡ’ ಎಂದು ಹೇಳಿದ್ದಾರೆ.


‘ವಿರೋಧ ಪಕ್ಷಗಳನ್ನ ಸದೆಬಡಿದು ಪ್ರಧಾನಿ ಮೋದಿ, ಅಮಿತ್ ಶಾ ಅಧಿಕಾರ ಮಾಡ್ತಿದ್ದಾರೆ. ರಾಜ್ಯ ಬಿಜೆಪಿ ನಾಯಕರನ್ನು ಹೈಕಮಾಂಡ್ ಹೆದರಿಸುತ್ತಿದ್ದಾರೆ. ಯಾರಾದ್ರೂ ಧ್ವನಿ ಎತ್ತಿದರೆ ರಾಜೀನಾಮೆ ಪಡೆಯುತ್ತಾರೆ. ರಾಜ್ಯ ಕಾಂಗ್ರೆಸ್ ನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಡಿಕೆಶಿ ವಿರುದ್ಧದ ಇಡಿ ತನಿಖೆ ಬಗ್ಗೆ ನಾಯಕರು ಖಂಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪ ಸರ್ಕಾರದ ಮೇಲೆ ನಿಗಾವಹಿಸಲು 3 ತಂಡಗಳನ್ನು ರಚಿಸಿದ ಅಮಿತ್ ಶಾ