Select Your Language

Notifications

webdunia
webdunia
webdunia
webdunia

ಈ ವಿಚಾರಕ್ಕೆ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಡಿ.ವಿ.ಸದಾನಂದಗೌಡ

ಈ ವಿಚಾರಕ್ಕೆ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಡಿ.ವಿ.ಸದಾನಂದಗೌಡ
ಬೆಂಗಳೂರು , ಮಂಗಳವಾರ, 13 ಏಪ್ರಿಲ್ 2021 (12:31 IST)
ಬೆಂಗಳೂರು : ಕೊರೊನಾ ವೇಳೆ ಯುರಿಯಾಗಿಂತ ಡಿಎಪಿ ಹೆಚ್ಚು ಬಳಕೆಯಾಗಿದೆ, 12ಲಕ್ಷ ಮೆಟ್ರಿಕನ್ ಟನ್ ಡಿಎಪಿ ಹೆಚ್ಚು ಅವಶ್ಯಕತೆ ಇದೆ. ಆದರೆ ಈ ವರ್ಷ ರಸಗೊಬ್ಬರಗಳ ಕೊರತೆ ಇರುವುದಿಲ್ಲ ಎಂದು ದೆಹಲಿಯಲ್ಲಿ ಕೇಂದ್ರ ರಾಸಾಯನಿಕ, ರಸಗೊಬ್ಬರ  ಸಚಿವ ಡಿ.ವಿ.ಸದಾನಂದಗೌಡ ಮಾಹಿತಿ ನೀಡಿದ್ದಾರೆ.

ರಸಗೊಬ್ಬರ ಬೆಲೆ ಏರಿಕೆಯಾಗುವ ಭಯ ರೈತರಲ್ಲಿ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ರಸಗೊಬ್ಬರ ಕಚ್ಚಾ ದರ ಹೆಚ್ಚಿದೆ. ಆದರೆ ಒಂದು ತಿಂಗಳೊಳಗೆ ದರ ಕಡಿಮೆಯಾಗುವ ಸಾಧ್ಯತೆ ಇದೆ. ಹಳೆಯ ದರದಲ್ಲಿ ರಸಗೊಬ್ಬರ ಮಾರಾಟಕ್ಕೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಆದರೆ ಹೆಚ್.ಡಿ.ಕುಮಾರಸ್ವಾಮಿ ಅಲ್ಪತನದ ಮಾತುಗಳನ್ನು ಆಡಿದ್ದಾರೆ. ಅವರ ತಂದೆ ಮಣ್ಣಿನ ಮಗ ಅಂತಾರೆ. ಕೇಂದ್ರದಿಂದ ಬರುವ ಗೊಬ್ಬರದ ಸಬ್ಸಿಡಿ ಬಗ್ಗೆ ಗೊತ್ತಿಲ್ಲ. ಬಾಯಿಗೆ ಬಂದ ಹಾಗೆ ಹೆಚ್.ಡಿ.ಕುಮಾರಸ್ವಾಮಿ ಮಾತಾಡುತ್ತಾರೆ. ಕುಮಾರಸ್ವಾಮಿಯೇ ಚರ್ಚಾಸ್ಪದ ವ್ಯಕ್ತಿ ಎಂದು ಅವರು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿತ್ರದುರ್ಗದ ಬಿಜೆಪಿ ಶಾಸಕ ಜೆ.ಹೆಚ್ ತಿಪ್ಪಾರೆಡ್ಡಿಗೆ ಕೊರೊನಾ