Webdunia - Bharat's app for daily news and videos

Install App

ಅಲ್ಲಿ ಇಲ್ಲಿ ಕೊಳ್ಳೆ ಹೊಡೆದ ಹಣವನ್ನು ಕಾಂಗ್ರೆಸ್ ಉಪಚುನಾವಣೆಯಲ್ಲಿ ಹಂಚುತ್ತಿದೆ: ಡಿವಿ ಸದಾನಂದ ಗೌಡ

Krishnaveni K
ಗುರುವಾರ, 7 ನವೆಂಬರ್ 2024 (14:53 IST)
ಬೆಂಗಳೂರು: ರಾಜ್ಯ ಉಪ ಚುನಾವಣೆಯ ಹೊಣೆ ಹೊತ್ತ ಕಾಂಗ್ರೆಸ್ ಮುಖಂಡರು ಕೊಳ್ಳೆ ಹೊಡೆದ ಗರಿಷ್ಠ ಹಣವನ್ನು ಈ 3 ಕ್ಷೇತ್ರಗಳಲ್ಲಿ ಬಳಸುವ ಪ್ರಯತ್ನದಲ್ಲಿರುವುದು ನಮ್ಮ ಗಮನಕ್ಕೆ ಬಂದಿದೆ. ಚುನಾವಣಾ ಕಮೀಷನರ್ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಆಗ್ರಹಿಸಿದರು.
 
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲವಾದರೆ, ಈ 3 ಉಪ ಚುನಾವಣೆಗಳು ನ್ಯಾಯಸಮ್ಮತ ಚುನಾವಣೆ ಆಗಲು ಸಾಧ್ಯವಿಲ್ಲ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷದ 3 ಜನ ಚುನಾವಣಾ ಉಸ್ತುವಾರಿಗಳ ಮೇಲೆ ಗಂಭೀರವಾದ ನಿಗಾ ವಹಿಸಬೇಕೆಂದು ಒತ್ತಾಯಿಸಿದರು. ಚುನಾವಣಾ ಆಯೋಗಕ್ಕೆ ಬೇಕಾದ ಮಾಹಿತಿಗಳನ್ನು ನೀಡಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು.
 
ನಿಗಾ ಇಲ್ಲದಿದ್ದರೆ, ಹಣದ ಪ್ರಭಾವದಿಂದ ಜನಸಾಮಾನ್ಯರ ತಲೆ ಹಾಳು ಮಾಡಿ ಈ ಚುನಾವಣೆಯನ್ನು ಹಣದ ಪ್ರಭಾವದ ಚುನಾವಣೆಯಾಗಿ ಪರಿವರ್ತಿಸಲಿದ್ದಾರೆ. ಇದಕ್ಕೆ ಬಿಜೆಪಿ ಹೆದರುವುದಿಲ್ಲ. ನಮ್ಮ ಕಾರ್ಯಕರ್ತರು, ಎನ್‍ಡಿಎ ಪ್ರಾಮಾಣಿಕ ಕಾರ್ಯಾಚರಣೆ ಮುಂದುವರಿಯಲಿದೆ. ಚುನಾವಣಾ ಆಯೋಗ ಒಂದುವೇಳೆ ಈ ಉಸ್ತುವಾರಿಗಳ ಭೂಗತ ಚಟುವಟಿಕೆಗಳನ್ನು ನಿಯಂತ್ರಿಸದೆ ಇದ್ದಲ್ಲಿ,
ಸಾಮಾನ್ಯ ಜನರ ಮೇಲೆ ಗಂಭೀರ ಪ್ರಭಾವ ಬೀರಬಹುದು ಎಂದು ಆತಂಕ ಸೂಚಿಸಿದರು.
 
ಕಾಂಗ್ರೆಸ್ ಪಕ್ಷದ ಚುನಾವಣೆ ಉಸ್ತುವಾರಿ ಪಡೆದವರ ಕುರಿತು ಸ್ವಲ್ಪಮಟ್ಟಿನ ಆತಂಕ ಇದೆ. ಸಂಡೂರಿನಲ್ಲಿ ಮೊನ್ನೆ ತಾನೇ ಜೈಲಿನಿಂದ ಹೊರಗೆ ಬಂದ ನಾಗೇಂದ್ರರ ಉಸ್ತುವಾರಿ ಇದೆ. ಇಡೀ ರಾಜ್ಯದಲ್ಲಿ ರೈತರ ಭೂಮಿಯನ್ನು ಕೊಳ್ಳೆ ಹೊಡೆಯಲು, ವಕ್ಫ್‍ಗೆ ಖಾತೆ ಬದಲಿಸಿ ಆಸ್ತಿ ನುಂಗಿ ನೀರು ಕುಡಿಯಲು ಹೊರಟ ಜಮೀರ್ ಶಿಗ್ಗಾಂವಿ ಉಸ್ತುವಾರಿ ಆಗಿದ್ದಾರೆ. ಚನ್ನಪಟ್ಟಣದಲ್ಲಿ ಸನ್ಮಾನ್ಯ ಡಿ.ಕೆ.ಶಿವಕುಮಾರರ ಚುನಾವಣಾ ಉಸ್ತುವಾರಿ ಇದೆ. ಕಾಂಗ್ರೆಸ್ಸಿಗೆ ಇದೊಂದು ಸವಾಲಿನ ಚುನಾವಣೆ ಎನಿಸಿದೆ ಎಂದು ವಿಶ್ಲೇಷಿಸಿದರು.

ಮುಡಾ ಹಗರಣದ ಆರೋಪಿ ಮುಖ್ಯಮಂತ್ರಿಯವರು ಲೋಕಾಯುಕ್ತದ ಮುಂದೆ ಹೋಗಿ ಎರಡು ಗಂಟೆಯಲ್ಲಿ ಹೊರಗೆ ಬಂದಿದ್ದಾರೆ. ಮತ್ತೆ ಇನ್ಯಾವಾಗ ಹೋಗಬೇಕೆಂಬ ಆಲೋಚನೆ, ಅದಕ್ಕೆ ಬೇಕಾದಂಥ ಹೊಂದಾಣಿಕೆ ಮಾಡುವ ಕಾರ್ಯಯೋಜನೆಯಲ್ಲಿದ್ದಾರೆ. ಎಲ್ಲ ಕಡೆಯಿಂದ ಚಕ್ರವ್ಯೂಹವನ್ನು ಪ್ರವೇಶಿಸಿದ ರೀತಿಯಲ್ಲಿ ಕಾಂಗ್ರೆಸ್ಸಿಗರು ಈ ಬಾರಿಯ ಉಪ ಚುನಾವಣೆಯನ್ನು ಎದುರಿಸುತ್ತಿದ್ದಾರೆ ಎಂದ ಅವರು, ಕರ್ನಾಟಕದ ಬೊಕ್ಕಸದಲ್ಲಿ ಲೂಟಿಯಲ್ಲಿ ನಿಸ್ಸೀಮರಾದ 3 ಜನ ಕಾಂಗ್ರೆಸ್ಸಿಗರು ಉಪ ಚುನಾವಣೆ ಉಸ್ತುವಾರಿ ತೆಗೆದುಕೊಂಡಿದ್ದಾರೆ. ಅವರು ಸಾಕಷ್ಟು ಹಣಬಲದಿಂದ ಚುನಾವಣೆ ಗೆಲ್ಲುವ ಮಾನಸಿಕತೆ ಉಳ್ಳವರು. ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣದಡಿ ಸಾಕಷ್ಟು ದುಡ್ಡನ್ನೂ ಕೊಳ್ಳೆ ಹೊಡೆದಿದ್ದಾರೆ. ಲೂಟಿ ಮಾಡುವ ಜಮೀರ್ ಕುರಿತು ಮಾತನಾಡುವುದೇ ಅಸಹ್ಯ ಅನಿಸುತ್ತಿದೆ ಎಂದು ಟೀಕಿಸಿದರು.

ಜನರು ಹಣದ ಪ್ರಭಾವಕ್ಕೆ ಒಳಗಾದರೆ, ರಾಜ್ಯದಲ್ಲಿ ಕಾಂಗ್ರೆಸ್ಸಿನ ಅಭಿವೃದ್ಧಿಶೂನ್ಯ ಆಡಳಿತ ಮುಂದುವರೆಯುತ್ತದೆ. ಹಗರಣಗಳ ಸರಕಾರ, ರೈತರ ಭೂಮಿ ಕಬಳಿಕೆ, ಮಳೆ ಹಾನಿಯ ಪರಿಹಾರ ಕೊಡಲಾಗದ ದಯನೀಯ ಸ್ಥಿತಿ ಮತ್ತೆ ಮುಂದುವರೆಯಲಿದೆ. ರಾಜ್ಯದಲ್ಲಿ 3ಕ್ಕೆ 3 ಸ್ಥಾನಗಳನ್ನು ಎನ್‍ಡಿಎ ಗೆಲ್ಲಲಿದೆ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಹಣದ ಪ್ರಭಾವವನ್ನು ನಿಲ್ಲಿಸಬೇಕಿದೆ. ಈ ಗೆಲುವಿನಿಂದ ರಾಜ್ಯದ ದುರಾಡಳಿತದ ವಿರುದ್ಧ ಒಂದು ಸಂದೇಶ ನೀಡಬೇಕಿದೆ ಎಂದು ತಿಳಿಸಿದರು.
ನಿನ್ನೆ ಚನ್ನಪಟ್ಟಣಕ್ಕೆ ಹೋಗಿದ್ದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜೊತೆ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಅಲ್ಲದೆ, ಸಂಡೂರು, ಶಿಗ್ಗಾಂವಿ ವಿಚಾರಗಳನ್ನೂ ತಿಳಿದುಕೊಂಡಿದ್ದೇನೆ ಎಂದರು.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Rahul Gandhi: ನೆಹರೂ ತಾತ ನಮ್ಗೆ ರಾಜಕೀಯವೇ ಹೇಳಿ ಕೊಟ್ಟಿಲ್ಲ

ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಗನಸಖಿ ಮೇಲೆ ಅತ್ಯಾಚಾರ, ರೇಪಿಸ್ಟ್‌ ಕೊನೆಗೂ ಅರೆಸ್ಟ್‌

ದಲಿತ ವಿದ್ಯಾರ್ಥಿನಿ ಆತ್ಮಹತ್ಯೆ: ಸಾವಿನ ಹಿಂದೆ ಮುಸ್ಲಿಂ ಯುವಕನ ಕಿರುಕುಳ ಆರೋಪ

Viral Video:ರನ್ಯಾ ರಾವ್ ಪ್ಲ್ಯಾನ್‌ಗಿಂತಲೂ ಖತರ್ನಾಕ್ ಆಗಿ ಮದ್ಯದ ಬಾಟಲಿ ಎಗರಿಸಿದ ಮಹಿಳೆ, ನೋಡಿದ್ರೆ ಶಾಕ್ ಆಗ್ತೀರಾ

Viral Video:ಜನರನ್ನು ರಕ್ಷಣೆ ಮಾಡಬೇಕಿದ್ದ ಪೊಲೀಸ್‌ ಅನ್ನೇ ಕೈ ಹಿಡಿದು ನಡೆಸುವ ಸ್ಥಿತಿ, ಈ ರೀತಿಯಾದ್ರೆ ಏನ್‌ ಕತೆ

ಮುಂದಿನ ಸುದ್ದಿ
Show comments